Advertisement
ಸೋಮಲಾಪುರ, ದೇವಲಾಪುರ ಗ್ರಾಮದಲ್ಲಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡ ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿದಿದೆ. ದೇವಲಾಪುರದ ಕರೆಗುಡ್ಡದ ಪಂಪಾಪತಿಯ ಹೊಲದಲ್ಲಿ ಇಟ್ಟಿದ್ದ ಬೋನಿಗೆ ಭಾನುವಾರ ಬೆಳಗಿನ ಜಾವ 5 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಡಿ.11ರಂದು ಸೋಮಲಾಪುರದಲ್ಲಿ ಬಾಲಕ ಹಾಗೂ ಡಿ.25ರಂದು ದೇವಲಾಪುರ ಗ್ರಾಮದ ಕರೆಗುಡ್ಡದ ಹತ್ತಿ ಹೊಲದಲ್ಲಿ ಬಾಲಕಿ ಬಲಿ ಪಡೆದಿತ್ತು. ಅರಣ್ಯಾಧಿಕಾರಿಗಳ ನಿರಂತರ ಕಾರ್ಯಾಚರಣೆಗೆ ಒಂದು ಹೆಣ್ಣು, ಒಂದು ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ, ಇನ್ನೂ ಈ ಭಾಗದಲ್ಲಿ ಚಿರತೆಗಳಿವೆ ಎಂಬ ಹಿನ್ನೆಲೆ ಅರಣ್ಯ ಅ ಧಿಕಾರಿಗಳು ಆಯಾ ಸ್ಥಳಗಳಲ್ಲಿ ಬೋನುಗಳನ್ನಿರಿಸಿ ಶೋಧ ಕಾರ್ಯ ತೀವ್ರಗೊಂಡಿದ್ದರಿಂದ ಬೆಳಗಿನ ಜಾವ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. Advertisement
ದೇವಲಾಪುರದಲ್ಲಿ ಬೋನಿಗೆ ಬಿದ್ದ 3ನೇ ನರಭಕ್ಷಕ ಚಿರತೆ
12:30 AM Dec 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.