Advertisement

IAS ಅಧಿಕಾರಿ ದಂಪತಿಯ ಪುತ್ರಿ 10 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

04:54 PM Jun 03, 2024 | Team Udayavani |

ಮುಂಬಯಿ: ಐಎಎಸ್ ಅಧಿಕಾರಿಗಳಾಗಿರುವ ದಂಪತಿಯ ಪುತ್ರಿಯೊಬ್ಬಳು 10 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

Advertisement

ಅಧಿಕಾರಿಗಳಾದ ವಿಕಾಸ್ ಚಂದ್ರ ರಸ್ತೋಗಿ ಮತ್ತು ರಾಧಿಕಾ ರಸ್ತೋಗಿ ದಂಪತಿಯ ಪುತ್ರಿ ಲಿಪಿ (27) ಎಂಬಾಕೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಾರಿಮನ್ ಪಾಯಿಂಟ್‌ನಲ್ಲಿರುವ ಸರಕಾರಿ ವಸತಿಗೃಹದ 10ನೇ ಮಹಡಿಯಿಂದ ಜಿಗಿದಿದ್ದಾಳೆ.ತತ್ ಕ್ಷಣ ಆಕೆಯನ್ನು  ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಲಿಪಿ ಹರಿಯಾಣದ ಸೋನಿಪತ್‌ನಲ್ಲಿ ಎಲ್‌ಎಲ್‌ಬಿ ಓದುತ್ತಿದ್ದಳು. ಶೈಕ್ಷಣಿಕ ಸಾಧನೆಯ ಬಗ್ಗೆ ಆತಂಕದಲ್ಲಿದ್ದಳು ಎನ್ನಲಾಗಿದೆ. ಸೂಸೈಡ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಯಾರನ್ನೂ ದೂಷಿಸಬೇಡಿ ಎಂದು ಬರೆದಿದ್ದಾಳೆ. ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next