Advertisement

ಗುಳೆ ಹೋಗಿದ್ದ 16 ಸಾವಿರ ಜನ ಮತ ಹಾಕಲು ಸ್ವಗ್ರಾಮಕ್ಕೆ ವಾಪಸ್‌

04:15 PM Apr 23, 2019 | Team Udayavani |

ಚಿಂಚೋಳಿ: ತಾಲೂಕಿನಿಂದ ನಗರ ಪ್ರದೇಶಗಳಿಗೆ ಕುಟುಂಬ ಸಮೇತ ವಲಸೆ ಹೋಗಿರುವ ಸುಮಾರು 16 ಸಾವಿರ ಜನ ಬೀದರ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಲು ಸ್ವಗ್ರಾಮ ಮತ್ತು ತಾಂಡಾಗಳಿಗೆ ಸೋಮವಾರ ಮರಳಿದ್ದಾರೆ.

Advertisement

ತಾಲೂಕಿನ ಚೆಂಟಗಾ, ಪಾಲತ್ಯಾ ತಾಂಡಾ, ಸಜ್ಜನಕೊಳ್ಳ, ಐನಾಪೂರ, ಭೂಯ್ನಾರ, ಬೆಡಸೂರ ತಾಂಡಾ, ಕೋಡ್ಲಿ ರಾಮನಗರ ತಾಂಡಾ, ಚಂದನಕೇರಾ, ಸಲಗರ ಬಸಂತಪೂರ, ಅಲ್ಲದೇ ಕುಂಚಾವರಂ ಗಡಿಪ್ರದೇಶದಲ್ಲಿ ಇರುವ ಸಂಗಾಪೂರ, ಶಾದಿಪೂರ, ಜಿಲವರ್ಷ, ವೆಂಕಟಾಪೂರ, ಪೆದ್ದಾತಾಂಡ, ಶ್ರೀನಗರ ತಾಂಡಾ, ವಂಟಿಚಿಂತಾ, ವಂಟಿಗುಡುಸಿ ತಾಂಡಾ, ಧರ್ಮಸಾಗರ, ಸೇರಿಭಿಕನಳ್ಳಿ, ಲಿಂಗಾನಗರ, ಚಿಂದಾನೂರ, ಜವಾಹರ ನಗರ ತಾಂಡಾ, ಚಾಪ್ಲಾ ನಾಯಕ ತಾಂಡಾ, ಭಿಕ್ಕು ನಾಯಕ ತಾಂಡಾಗಳ ಕೆಲವರು ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಮುಂಬೈ, ಪುಣೆ, ನಾಗಪೂರ, ಉಸ್ಮಾನಾಬಾದ, ಸೊಲ್ಲಾಪುರ, ಉದಗೀರ, ಗುಜರಾತ್‌, ಅಹ್ಮದನಗರ ಅಲ್ಲದೇ ತೆಲಂಗಾಣ ರಾಜ್ಯದ ಮೆಹಬೂಬನಗರ, ಸಂಗಾರೆಡ್ಡಿ, ಮೇದಕ, ಕರಿಂನಗರ, ಹೈದ್ರಾಬಾದ್‌, ಬೆಂಗಳೂರು, ಮೈಸೂರ ನಗರ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ಹೋಗಿದ್ದರು. ಮತ ಹಾಕುವುದಕ್ಕಾಗಿ ತಮ್ಮ ಗ್ರಾಮಕ್ಕೆ ರವಿವಾರದಿಂದಲೇ ವಾಪಸ್‌ ಆಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next