Advertisement

ಮ.ಪ್ರದೇಶ ಮದ್ರಸಗಳಲ್ಲೂ ಆ.15 ಆಚರಣೆ ಕಡ್ಡಾಯ

07:40 AM Aug 13, 2017 | Team Udayavani |

ಭೋಪಾಲ್‌: ರಾಜ್ಯದ ಎಲ್ಲ ಮದ್ರಸಗಳೂ ಸ್ವಾತಂತ್ರ್ಯದಿನವನ್ನು ಆಚರಿಸುವ ಜತೆಗೆ ಕಡ್ಡಾಯವಾಗಿ ವಿಡೀಯೋ ಚಿತ್ರೀಕರಣ ಮಾಡುವಂತೆ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮಧ್ಯಪ್ರದೇಶ ಸರಕಾರ ಕೂಡ ಅಂಥದ್ದೇ ಆದೇಶವೊಂದನ್ನು ಹೊರಡಿಸಿದೆ.

Advertisement

“ಮಧ್ಯಪ್ರದೇಶ ಮದ್ರಸ ಮಂಡಳಿ ಅಡಿಯಲ್ಲಿ ಬರುವ  4,750 ಮದ್ರಸಗಳು ಆ.15ರಂದು ತ್ರಿವರ್ಣ ಧ್ವಜಾರೋಹಣ ಮಾಡುವ ಜತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೇ ಅಂದು ರಾಜ್ಯಾದ್ಯಂತ ನಡೆಯುವ “ತಿರಂಗಾ ರ್ಯಾಲಿ’ಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಅಥವಾ ಪ್ರತ್ಯೇಕವಾಗಿ ರ್ಯಾಲಿ ಆಯೋಜಿಸಬೇಕು’ ಎಂದು ಸೂಚಿಸಿದೆ. ಈ ಕುರಿತು ಆ.10ರಂದು ಎಲ್ಲ ಮದ್ರಸಗಳಿಗೆ ಸುತ್ತೋಲೆ ಹೊರಡಿಸಿರುವ ಮಂಡಳಿ, ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳ ಫೋಟೋ ತೆಗೆದು ಅವುಗಳನ್ನು ತನಗೆ ಇ-ಮೇಲ್‌ ಮಾಡುವಂತೆಯೂ ಮದ್ರಸಗಳ ಮುಖ್ಯಸ್ಥರಿಗೆ ತಾಕೀತು ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮದರಸಾ ಮಂಡಳಿ ಮುಖ್ಯಸ್ಥ ಪ್ರೊ| ಸಯೀದ್‌ ಇಮಾದ್‌ ಉದ್ದೀನ್‌, “ತಿರಂಗಾ ರ್ಯಾಲಿಗಳನ್ನು ಆಯೋಜಿಸುವ ಮೂಲಕ  ನಮಗೆ ದೇಶದ ಬಗ್ಗೆ ಇರುವ ಪ್ರೀತಿ, ಅಭಿಮಾನವನ್ನು ತೋರ್ಪಡಿಸುವುದು ನಮ್ಮ ಉದ್ದೇಶವಾಗಿದೆ. ಒಂದೊಮ್ಮೆ ನಗರದಲ್ಲಿ ಸಂಘಟನೆಗಳು ರ್ಯಾಲಿ ಆಯೋಜಿಸದಿದ್ದಲ್ಲಿ, ಸ್ವತಃ “ತಿರಂಗಾ ರ್ಯಾಲಿ’ ನಡೆಸುವಂತೆ ಮದ್ರಸಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next