Advertisement

ನಾಸಿಕ್‌ ಬಂಟರ ಸಂಘದ 13ನೇ ವಾರ್ಷಿಕೋತ್ಸವ ಸಂಭ್ರಮ

04:10 PM Feb 15, 2019 | |

ನಾಸಿಕ್‌: ವ್ಯಕ್ತಿಯೊಬ್ಬ ಸತತ ಪರಿಶ್ರಮದಿಂದ ಎಷ್ಟೇ ಸಂಪತ್ತು, ಸ್ಥಾನ-ಮಾನ, ಕೀರ್ತಿ ಸಂಪಾದಿಸಿದರೂ ಅದರಿಂದ ವೈಯಕ್ತಿಕ ಏಳ್ಗೆ ಸಾಧ್ಯವೇ ಹೊರತು ಸಮಾಜಕ್ಕೆ ದೊಡ್ಡ ಲಾಭವಾಗದು. ಆದರೆ ನಿಸ್ವಾರ್ಥ ಭಾವದಿಂದ ತನ್ನ ಸಮುದಾಯದ ಅಭಿವೃದ್ಧಿಗೆ ಕಿಂಚಿತ್ತಾದರೂ ದುಡಿದಾಗ ಆತ ಜನರಿಂದ  ಗುರುತಿಸಲ್ಪಡುತ್ತಾನೆ. ಅಂತಹ ಸಾಧಕರಿಂದ ಸಮಾಜಕ್ಕೆ ಗೌರವ ಪ್ರಾಪ್ತವಾಗುವುದು ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ, ಲೇಖಕ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿ¨ªಾರೆ.

Advertisement

ನಗರದ ಶಾಲಿಮಾರ್‌ ಸಾಲೆVàಡ್ಕರ್‌ ನಾಟ್ಯ ಮಂದಿರದಲ್ಲಿ ಇತ್ತೀಚೆಗೆ ಜರಗಿದ ನಾಸಿಕ್‌ ಬಂಟರ ಸಂಘದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು,  ತವರೂರಿಂದ ಬರಿಗೈಯಲ್ಲಿ ಹೋದ ಮಂದಿ ಹೊರನಾಡಲ್ಲಿ ಹೊಟ್ಟೆ ಪಾಡಿಗಾಗಿ ದುಡಿದು ತಮ್ಮ ಸಂಪಾದನೆಯ ಒಂದು ಭಾಗವನ್ನು ತಾಯ್ನಾಡಿನ ಸಂಸ್ಕೃತಿಯ ಪ್ರಸರಣಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘ ನೀಯ. ತಾವು ಹೋದÇÉೆÇÉಾ ಸಂಘಟನೆಗಳ ಮೂಲಕ ತಮ್ಮ ಮೂಲ ನೆಲೆಗಳನ್ನು ಗಟ್ಟಿಗೊಳಿಸಿ ಒಗ್ಗಟ್ಟಿನಿಂದ ಬಾಳುವ ಬಂಟ ಬಂಧುಗಳು ಇತರರಿಗೆ ಮಾದರಿಯಾಗಿ¨ªಾರೆ ಎಂದವರು ನುಡಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲಬೆಟ್ಟು ಸಂತೋಷ್‌ ಶೆಟ್ಟಿ ಅವರು,  ಸಂಘ ಸಂಸ್ಥೆಗಳು ಕೇವಲ ಉತ್ಸವಾಚರಣೆಗಳಿಂದ ತೃಪ್ತಿ ಪಟ್ಟುಕೊಂಡರೆ ಸಾಲದು. ಎಲ್ಲರೂ ಒಂದೇ ಮನಸ್ಸಿನಿಂದ ದುಡಿದು ತಮ್ಮವರ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಬೇಕಾದ ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ವರ್ಷದ ಹಿಂದೆ ಪುಣೆ ಬಂಟರ ಭವನ ನಿರ್ಮಾಣವಾದ ಬಗ್ಗೆ ತಮ್ಮ ಸ್ವಾನುಭವವನ್ನು ಅವರು ವಿವರಿಸಿದರು.

ನಾಸಿಕ್‌ ಬಂಟರ ಸಂಘದ ಅಧ್ಯಕ್ಷ ಇ. ಭಾಸ್ಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಸಿಕ್‌ ಬಂಟರ ಸಂಘವು ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ನೆಲೆಸಿರುವ ಬಂಟ ಬಾಂಧವರನ್ನು ಒಂದುಗೂಡಿಸುವ ಉದ್ಧೇಶದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಂಘದ ಸಮಾಜಪರ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಒಗ್ಗಟ್ಟು-ಒಮ್ಮತದಿಂದ ಪಾಲ್ಗೊಂಡು ಸಂಘದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಅತಿಥಿಗಳಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಂತೋಷ್‌ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ರವಿರಾಜ ಶೆಟ್ಟಿ ಮತ್ತು ಲಾವಣ್ಯ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಸಂಘದ ಸ್ಥಾಪಕಾಧ್ಯಕ್ಷ  ಲಿಂಗಪ್ಪ ಶೆಟ್ಟಿ, ಪೂರ್ವಾಧ್ಯಕ್ಷರುಗಳಾದ ರಾಜಗೋಪಾಲ್‌ ಶೆಟ್ಟಿ, ಕರುಣಾಕರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಜೆ. ಶೆಟ್ಟಿ ಉಪಸ್ಥಿತರಿದ್ದರು.

Advertisement

ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶಿತ್‌ ಶೆಟ್ಟಿ ಪ್ರಸ್ತಾವನೆಗೈದು ವಂದಿಸಿದರು. ಪ್ರದೀಪ್‌ ರೈ ಮತ್ತು ಸುಚಿತ್ರಾ ರೈ  ನಿರೂಪಿಸಿದರು. ಪ್ರತಿ ರೈ, ಪ್ರಭಾ ಆರ್‌. ಶೆಟ್ಟಿ, ಅಮಿತ್‌ ಶೆಟ್ಟಿ ಸಹಕರಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕಟೀಲು ತಂಡ, ಕುಶಿ ಡಿ. ಶೆಟ್ಟಿ, ಹರ್ಷಿತಾ  ಆಳ್ವ, ರûಾ ಶೆಟ್ಟಿ ಮತ್ತು ಬಳಗದಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು. ಅಲ್ಲದೆ ಐರೋಲಿ ತುಳುಕೂಟದವರಿಂದ ಭೂತಾಳಪಾಂಡ್ಯ ನಾಟಕ ಹಾಗೂ ನಟಸಾಮ್ರಾಟ್‌ ನಾಸಿಕ್‌ ತಂಡದಿಂದ ಪುಣ್ಯಕೋಟಿ ಕಥೆಯನ್ನಾಧರಿಸಿದ ಸತ್ಯಮೇವ ಜಯತೇ ಯಕ್ಷಗಾನ ಪ್ರದರ್ಶನಗೊಂಡಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next