ಶಿವಮೊಗ್ಗ: ’40 ಪರ್ಸೆಂಟ್ ಲಂಚದ ಬಗ್ಗೆ ಸಂತೋಷ್ ದೆಹಲಿ ನಾಯಕರ ಗಮನ ಸೆಳೆದಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ದುರಂತ’ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.
‘ಹಿಂದೂ ವ್ಯಕ್ತಿಯೊಬ್ಬನ ಕೊಲೆಯಾಗಿದೆ.ಈಶ್ವರಪ್ಪ ನೈತಿಕ ಹೊಣೆ ಹೊತ್ತು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದಾಗ ಕಾಂಗ್ರೆಸ್ ಗೆ ಹತ್ತು ಪರ್ಸೆಂಟ್ ಸರ್ಕಾರ ಎಂದು ಜರಿದಿದ್ದರು.ಈಗೇನಾಯ್ತು, 40 ಪರ್ಸೆಂಟ್ ಸರ್ಕಾರವಾಗಿದೆ’ ಎಂದು ಕಿಡಿ ಕಾರಿದರು.
‘ಹರ್ಷನ ಕೊಲೆಯಾದಾಗ ಹೇಗೆ ಸ್ವಾಮಿಜಿಗಳು ಸೇರಿದಂತೆ, ಎಲ್ಲರೂ ಬಂದಿದ್ದರೋ, ಹಾಗೆಯೇ, ಈಗಲೂ ಸಂತೋಷ್ ಮನೆಗೆ ಬರಬೇಕು. ಸಂತೋಷ್ ಕೂಡ ಒಬ್ಬ ಹಿಂದೂ ಕಾರ್ಯಕರ್ತ.ಸಂತೋಷ್ ಕೊಲೆಯೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎಂದರು.
‘ಸಂತೋಷ್ ಆತ್ಮಹತ್ಯೆಯಲ್ಲಿ, ಕಾಂಗ್ರೆಸ್ ಪಿತೂರಿ ಇದೆ’ ಎಂದು ಲುಚ್ಚ ರೇಣುಕಾಚಾರ್ಯ ಹೇಳುತ್ತಾನೆ. ‘ಬಿಜೆಪಿಗೆ ಯತ್ನಾಳ್ ಮತ್ತು ರೇಣುಕಾಚಾರ್ಯ ಇಬ್ಬರೂ ಕಂಟಕ’ ಎಂದರು.
‘ನಮ್ಮ ಕಾಂಗ್ರೆಸ್ ಹೇಗೆ ಇದರಲ್ಲಿ ಶಾಮೀಲಾಗುತ್ತದೆ? ಹರ್ಷನ ಕೊಲೆಯಲ್ಲಿ ಕಾಂಗ್ರೆಸ್ ಪಾತ್ರವೇನು? ಇವೆಲ್ಲಾ ಹೇಳುವ ರೇಣುಕಾಚಾರ್ಯ ಅದೇಗೆ, ಬಿಜೆಪಿಯಲ್ಲಿದ್ದಾನೋ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಬಗ್ಗೆ ಆರೋಪ ಮಾಡುವ ಇವರು, ಮೊದಲು ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ’ ಎಂದು ಕಿಡಿ ಕಾರಿದರು.