ಹುಣಸೂರು: ಹೊರ ರಾಜ್ಯಗಳಿಂದ ಆಗಮಿಸುವ ಎಲ್ಲರಿಗೂ ಕ್ವಾರಂಟೈನ್‌ನಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಇರಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚಿಸಿದರು.
ಲಾಕ್‌ಡೌನ್ ನಡುವೆಯೂ ವಿವಿಧ ರಾಜ್ಯಗಳಿಂದ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಣಸೂರಿನ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಬಗ್ಗೆ ಮಾಹಿತಿ ದೊರೆಯಲಿದೆ. ಆದರೆ, ಕೆಲವರು ಚೆಕ್‌ಪೋಸ್ಟ್‌ಗೆ ಬಾರದೆ ಕಳ್ಳ ಮಾರ್ಗದಲ್ಲಿ ಮನೆ ಸೇರಿಕೊಳ್ಳುವ ಸಾಧ್ಯತೆ ಇದೆ.
ಕೋವಿಡ್-19 ತಡೆಗಾಗಿ ಹೊರಗಿನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ವಾಗು ವುದು ನಿಶ್ಚಿತ ಎಂದರು.
ಐದು ಕಡೆ ವ್ಯವಸ್ಥೆ: ಹೊರ ರಾಜ್ಯಗಳಿಂದ ಬಂದವರಿಗೆ ಬಿಳಿಕೆರೆ ಬಳಿಯ ಸಬ್ಬನಹಳ್ಳಿ ಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಧರ್ಮಾಪುರ ಬಳಿಯ ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ವಸತಿಶಾಲೆ, ನಾಗಾಪುರ ಆಶ್ರಮಶಾಲೆ ಸೇರಿದಂತೆ ಮತ್ತೆರಡು ಕಡೆಗಳಲ್ಲಿ ಸಮಾರು 300 ಮಂದಿ ಉಳಿದುಕೊಳ್ಳಲು ಕಾಯ್ದಿರಿಸಲಾಗಿ ದೆ ಎಂದು ತಹಶೀಲ್ದಾರ್ ಬಸವರಾಜು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ರಿಷ್ಯಂತ್, ಜಿಪಂ ಸಿಇಒ ಪ್ರಶಾಂತ್ ಶರ್ಮ, ಉಪ ವಿಭಾಗಾಧಿಕಾರಿ ಬಿ.ಎನ್. ವೀಣಾ, ತಾಪಂ ಇಒ ಗಿರೀಶ್, ಟಿಎಚ್‌ಒ ಡಾ.ಕೀರ್ತಿಕುಮಾರ್, ಡಿವೈಎಸ್‌ಪಿ ಸುಂದರರಾಜ್, ಪೂವಯ್ಯ ಇದ್ದರು.