Advertisement
ಅವರು ಜ. 3ರಂದು ಅದಮಾರು ಮೂಲಮಠದಲ್ಲಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಮಗೆ ನೀಡಿದ್ದ ಔತಣ ಕೂಟದಲ್ಲಿ ಭಾಗವಹಿಸಿ ಶ್ರೀ ವಾಸುದೇವರ ಮೂಲ ಸನ್ನಿಧಾನದಲ್ಲಿ ತಮಗಿತ್ತ ಮಾಲಿಕೆ ಮಂಗಳಾರತಿಯನ್ನು ಸ್ವೀಕರಿಸಿ ಆಶೀರ್ವಚಿಸುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಮಸ್ಯೆಗಳನ್ನೆಲ್ಲಾ ಆಚ್ಛಾದನೆಯನ್ನು ಮಾಡುವ ವಾಸುದೇವರ ಸನ್ನಿಧಾನದಲ್ಲಿ ಪಲಿಮಾರು ಶ್ರೀಪಾದರನ್ನು ಉಡುಪಿಯಲ್ಲಿನ ಎರಡು ವರ್ಷದ ಕಾರ್ಯಕ್ರಮಗಳಿಗಾಗಿ ಬೀಳ್ಕೊಡುತ್ತಿದ್ದೇವೆ. ಉಡುಪಿ ಶ್ರೀ ಕೃಷ್ಣ, ಮುಖ್ಯಪ್ರಾಣರ ಮುಖೇನ ಭಕ್ತರೆಲ್ಲರ ಸಹಕಾರದಿಂದ ಅವರ ನೆನೆಸಿರುವ ಮಹಾನ್ ಕಾರ್ಯಗಳೆಲ್ಲಾ ಮಲ್ಲಿಗೆಯ ಹೂವಿನಂತೆ ಕೈಗೂಡಿಸಲಿರುವರು ಎಂದರು.
ವೇ | ಮೂ | ಮಧುಸೂದನ ಆಚಾರ್ಯರ ಪೌರೋಹಿತ್ಯದಲ್ಲಿ ಅದಮಾರು ಮಠದ ಮುಂಬಯಿ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಶ್ರೀ ಶ್ರೀಗಳ ಮಾಲಿಕೆ ಮಂಗಳಾರತಿಯನ್ನು ನೆರವೇರಿಸಿದರು. ಅದಮಾರು ಮಠದ ದಿವಾನ ವೆಂಕಟರಮಣ ಮುಚ್ಚಿಂತಾಯ, ಶಿಬರೂರು ವೇ | ಮೂ | ವಾಸುದೇವ ಆಚಾರ್ಯ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ದ.ಕ., ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅದಮಾರು ಶಿಕ್ಷಣ ಮಂಡಳಿ ಕಾರ್ಯದರ್ಶಿ, ನ್ಯಾಯವಾದಿ ಪ್ರದೀಪ್ ಕುಮಾರ್, ಶ್ರೀ ಪಲಿಮಾರು ಮಠದ ದಿವಾನರಾದ ಶಿಬರೂರು ವೇ | ಮೂ | ವೇದವ್ಯಾಸ ತಂತ್ರಿ, ದ.ಕ., ಜಿಲ್ಲಾ ವಿಹಿಂಪ ಅಧ್ಯಕ್ಷ ಎಂ. ಬಿ. ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು. ಅದಮಾರಿಗೆ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಬೆಳಗ್ಗೆ ಆಗಮಿಸಿದಾಗ ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ವೈಭವೋಪೇತವಾಗಿ ಸ್ವಾಗತಿಸಿ ಶ್ರೀ ಅದಮಾರು ಮೂಲ ಮಠದತ್ತ ಮೆರವಣಿಗೆಯಲ್ಲಿ ಕರೆದು ಕೊಂಡು ಒಯ್ದಿದ್ದರು.