Advertisement

ಸುಂದರಾಂಗಿ ಸಾರಿ ಕಣೋ ಅಂದಳು!

08:30 AM Oct 17, 2017 | |

ಪ್ರೀತಿಯೆಂಬ ಎರಡಕ್ಷರದ ಮಹಾಸಾಗರದಲ್ಲಿ ಈಜಬೇಕೆಂಬುದು ಪ್ರತಿಯೊಂದು ಹರೆಯದ ಹೃದಯ ಕೋರುವ ಹೆಬ್ಬಯಕೆ. ಇದಕ್ಕೆ ಕಾರಣ ಪ್ರೀತಿಯಲ್ಲಿದ್ದೇವೆ ಎಂಬ ಭ್ರಮಾಲೋಕವೇ ಒಂದು ರೀತಿಯ ಆನಂದವನ್ನು ನೀಡುತ್ತದೆ. ಇನ್ನು ನಿಜವಾಗಿ ಪ್ರೇಮಿಗಳಾದರೇ ಆ ಭಾವನೆಗಳ ತಲ್ಲಣ, ಮನಸಿನಲ್ಲಿರುವ ಮೌನಮಾತುಗಳು, ತುಟಿಯಂಚಿನಿಂದ ಕೆನ್ನೆಯ ಮೇಲಿನ ನಸುನಾಚಿಕೆ, ಕಣ್ಣಂಚಿನಲ್ಲಿ ನಮ್ಮ ಮೇಲೆ ತೋರುವ ಪ್ರೀತಿ…ಅಬ್ಟಾ! ಇಂತಹ ಆನಂದ ಮತ್ಯಾವುದರಲ್ಲಾದರೂ ದೊರೆಯುವುದುಂಟೇ? ಈ ಕಾರಣಗಳಿಂದಲೇ ಪ್ರತಿಯೊಂದು ಹರೆಯದ ಹೃದಯ ದ್ವಿಲಿಂಗಿಗಳ ಆಕರ್ಷಣೆಗೆ ಸಿಲುಕಿ ಪ್ರೀತಿಯೆಂಬ ಅಮೃತದ ರುಚಿಯನ್ನು ಸವಿಯಬೇಕೆನ್ನುಕೊಳ್ಳುವುದು! ಇದು ಪ್ರಕೃತಿಯ ಸಾಮಾನ್ಯ ಪ್ರಕ್ರಿಯೆಗಳಲೊಂದು! 

Advertisement

ನಾನು ಕೊನೆಯ ಬೆಂಚಿನ ವಿದ್ಯಾರ್ಥಿಯಾಗಿರುವುದರಿಂದ ಓದಿಗಿಂತಲೂ ಸಿನಿಮಾಗಳ ಮೇಲೆಯೇ ಹೆಚ್ಚು ಒಲವಿತ್ತು. ನನಗೆ ಕನ್ನಡ- ತೆಲುಗು ಎರಡು ಭಾಷೆಗಳು ಬರುವುದರಿಂದ ಈ ಭಾಷೆಗಳಲ್ಲಿ ಬಿಡುಗಡೆಯಾಗುವಂತಹ ಯಾವುದೇ ಚಿತ್ರವನ್ನಾಗಲಿ ಮೊದಲ ದಿನದ ಮೊದಲನೇ ಆಟವನ್ನು ನೋಡಿದರೇನೇ ನನಗೆ ಸಂತೋಷ. ಇನ್ನೂ ಚೆನ್ನಾಗಿ ಅರ್ಥವಾಗುವಂತೆ ಹೇಳುವುದಾದರೇ ನಾನು ಪ್ರತಿ ಶುಕ್ರವಾರ ಕಾಲೇಜಿಗೆ ಹೋಗುತ್ತಲೇ ಇರಲಿಲ್ಲ! ಈ ಪರಿಯಾಗಿ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದರಿಂದ ನನಗೂ ಪ್ರೀತಿಯಲ್ಲಿ ಬೀಳಬೇಕೆಂದು ಎನ್ನಿಸುತ್ತಿತ್ತು. ಆದರೆ ಎಂತಹ ಹುಡುಗಿಯನ್ನು ಪ್ರೀತಿಸಬೇಕೆಂದು ನಮ್ಮ ಕಾಲೇಜಿನ ಯಾವ ಹುಡುಗಿಯಾದರೇ ನನಗೆ ಸೂಟ್‌ ಆಗುತ್ತಾಳೆಂದು ಭ್ರಮಿಸಿಕೊಂಡರೆ, ನನ್ನ ಕನಸಿನ ನಾಯಕಿಯನ್ನು ಬೀಟ್‌ ಮಾಡುವವಳು ಒಬ್ಬಳೂ ಸಿಕ್ಕಲಿಲ್ಲ. ನಮ್ಮ ಕಾಲೇಜಿನಲ್ಲಿ ಸಿಗುವವಳ ಜೊತೆ ಪ್ರೀತಿಯಲ್ಲಿ ಬೀಳುವುದು ಅಷ್ಟರಲ್ಲೇ ಇದೆ ಎಂದುಕೊಂಡು ನನ್ನ ಮನಸ್ಸಿಗೆ ನಾನೇ ಸಮಾಧಾನ ಹೇಳಿಕೊಂಡು ಈ ಪ್ರೀತಿ- ಗೀತಿ ಬೇಡವೇ ಬೇಡವೆಂದು ಹಿಂಜರಿಯುತ್ತಿ¨ªೆ. ಹೀಗೆಯೇ ನನ್ನ ಪದವಿಯ ಎರಡು ವರ್ಷಗಳು ಕಳೆದುಹೋದವು.

ಪದವಿಯ ಅಂತಿಮ ವರ್ಷಕ್ಕೆ ಕಾಲಿಟ್ಟಾಗ ಕಾಲೇಜಿನಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಎಲ್ಲರೂ ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುವಂತಹ ಉಡುಗೆಯನ್ನು ಧರಿಸಿ ಕಾಲೇಜಿಗೆ ಬರಬೇಕೆಂದು ಪ್ರಾಂಶುಪಾಲರು ಸೂಚನೆ ನೀಡಿದರು. ಆ ಸೂಚನೆಯ ಮೇರೆಗೆ ಕಾರ್ಯಕ್ರಮಕ್ಕೆ ಹುಡುಗರೆಲ್ಲರೂ ಬಿಳಿ ಪಂಚೆ ಮತ್ತು ಬಿಳಿ ವಸ್ತ್ರವನ್ನು ಧರಿಸಿದ್ದರು. ಹುಡುಗಿಯರೆಲ್ಲರೂ ಸೀರೆಗಳನ್ನು ಕಟ್ಟಿಕೊಂಡು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದ್ದರು. ಅಂದು ನನಗೆ ಎಲ್ಲಿಲ್ಲದ ಆಶ್ಚರ್ಯ! ನಮ್ಮ ಕಾಲೇಜಿನಲ್ಲಿ ಇಂತಹ ಸುಂದರಾಂಗಿಗಳಿ¨ªಾರಾ? ಇವರು ನನಗೆ ಎಂದೂ ಹೆಣ್ಣಾಗಿಯೂ ಸಹ ಅನ್ನಿಸಿರಲಿಲ್ಲ! ಹೀಗೆ ಯಾವ ಹುಡುಗಿಯನ್ನು ಪ್ರೀತಿಸಬೇಕೆಂಬ ನನ್ನ ಮನದಾಳದ ಪ್ರಶ್ನೆಗೆ ಅಂದು ಉತ್ತರ ದೊರೆಯಿತು. ಅದಕ್ಕೆ ಕಾರಣ ನಾನು ಆ ಹುಡುಗಿಯನ್ನು ಸೀರೆಯಲ್ಲಿ ನೋಡಿರುವುದು! ಅಂದಿನಿಂದ ಆ ಹುಡುಗಿಯ ಮೇಲೆ ಪ್ರೀತಿ ಮೊಳಕೆಯಾಗಿ ನನ್ನೆದೆಯಲ್ಲಿ ಹುಟ್ಟಿ ನಿಧಾನವಾಗಿ ಬೆಳೆಯಲಾರಂಭಿಸಿತು. ಇತ್ತ ನೋಡಿದರೇ ನನ್ನ ಪದವಿಯೂ ಸಹ ಮುಗಿಯುವ ಹಂತಕ್ಕೆ ಬರುತ್ತಿದೆ! ಈ ಸಮಯದಲ್ಲಿ ಏನಾದರೂ ಮಾಡಿ ಆ ಹುಡುಗಿಗೆ ನನ್ನ ಪ್ರೀತಿಯ ವಿಷಯವನ್ನು ತಿಳಿಸಲೇಬೇಕೆಂದು ಗಟ್ಟಿ ನಿರ್ಧಾರಕ್ಕೆ ಬಂದೆ. 

ಕೊನೆಯ ಬೆಂಚಿನಲ್ಲಿ ಕೂತು ಮೇಷ್ಟ್ರುಗಳ ಮಾತಿಗೆ ಭಯವಿಲ್ಲದೇ ಎದುರುತ್ತರ ಕೊಡುತ್ತಿದ್ದ ನನಗೆ ಆ ಹುಡುಗಿಗೆ ಪ್ರೀತಿಯ ವಿಷಯ ತಿಳಿಸಲು ಹೃದಯದಲ್ಲಿ ಒಂಥರಾ ಭಯವು ಆವರಿಸಿತು! ಆದರೂ ಎದೆಗುಂದದೆ ಒಂದು ದಿನ ಸ್ನೇಹಿತರ ಸಲಹೆಗಳ ಮೇರೆಗೆ ಡೈರಿಮಿಲ್ಕ… ಚಾಕ್ಲೇಟ್‌ ಖರೀದಿಸಿ ಅವಳ ಮುಂದೆ ನಿಂತು ಮುಖವನ್ನು ಪಕ್ಕಕ್ಕೆ ತಿರುಗಿಸಿ ಕೈಯಲ್ಲಿದ್ದ ಡೈರಿಮಿಲ್ಕ… ಅವಳಿಗೆ ನೀಡುತ್ತಾ ಬಹಳ ನಾಚಿಕೊಳ್ಳುತ್ತಾ “ಅಮ್ಮಿà ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಲವ್‌ ಯು’ ಎಂದು ಹೆದರಿಕೆಯ ತೊದಲು ನುಡಿಗಳಿಂದಲೇ ನನ್ನ ಭಾವನೆಯನ್ನು ಅವಳಿಗೆ ತಿಳಿಸಿದೆ! ಆಗ ಆ ಹುಡುಗಿ ನನ್ನ ಪ್ರೀತಿಯನ್ನು ನಿರಾಕರಿಸಿದಳು. ಆದರೆ ನನ್ನ ಮನಸ್ಸಿಗೆ ಯಾವುದೇ ರೀತಿಯ ನೋವನ್ನುಂಟು ಮಾಡದೇ ನಯವಾದ ಮಾತುಗಳಿಂದ ನನಗೆ ಬುದ್ದಿವಾದವನ್ನು ಹೇಳಿ ನಾನು ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ನನಗೆ ಸಲಹೆಗಳನ್ನು ನೀಡಿದಳು. 

ಹೀಗೆ ಪ್ರತಿದಿನ ಕಾಲೇಜಿನಲ್ಲಿ ನೋಡುವಾಗ ಆ ಹುಡುಗಿ ನನಗೆ ಎಂದೂ ವಿಶೇಷವಾಗಿ ಕಂಡಿರಲಿಲ್ಲ. ಆದರೆ ಅದೇ ಹುಡುಗಿಯನ್ನು ಸೀರೆಯಲ್ಲಿ ನೋಡಿದರಿಂದ ನನಗೆ ಏಕಾಏಕಿ ಆ ಹುಡುಗಿಯ ಮೇಲೆ ಪ್ರೀತಿಯಾಗಿ ಇಷ್ಟೆಲ್ಲಾ ಘಟನೆಗಳು ನಡೆಯಲು ಆ ಸೀರೆಯು ಕಾರಣವಾಯಿತು! ಹೆಣ್ಣಿಗೂ ಸೀರೆಗೂ ಎಲ್ಲಿಂದ ಎಲ್ಲಿನ ಸಂಬಂಧವೋ? ಅದಕ್ಕೆ ಏನೋ ಯೋಗರಾಜಭಟ್ಟರು “ಸೀರೇಲಿ ಹುಡುಗೀರ ನೋಡಲೇಬಾರದು’ ಎಂದು ಹೇಳಿರುವುದು ಅನ್ನಿಸುತ್ತದೆ.

Advertisement

ಗಿರೀಶ್‌ ಚಂದ್ರ ವೈ. ಆರ್‌., ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next