ಔರಾದ: ಶಿಸು ಅಭಿವೃದ್ಧಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಮೇಲ್ವಿಚಾರಕಿ ಮತ್ತು ಹೃದಯರೋಗದ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ನರಳುತ್ತಿರುವ ತಾಲೂಕಿನ ಬೋರಾಳ ಗ್ರಾಮದ ನಾಗಮ್ಮಾ ಗಣಪತರಾವ ಖಾತೆಗೆ ಗುರುವಾರ ವೇತನ ಪರಿಸ್ಕರಣೆ ಹಿಂಬಾಕಿಯ ನಾಲ್ಕು ಲಕ್ಷ ರೂ. ಜಮೆ ಮಾಡಲಾಗಿದೆ. ಅದರಂತೆ ಇನ್ನೂಳಿದ ಹತ್ತು ಲಕ್ಷ ರೂ. ನಿವೃತ್ತಿ ವೇತನ ಹದಿನೈದು ದಿನಗಳಲ್ಲಿ ನೀಡಲಾಗುತ್ತದೆ ಎಂದು ತಾಲೂಕು ಶಿಸು ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ಹಿರೇಮಠ ತಿಳಿಸಿದ್ದಾರೆ.
ತುಂಬಾ ಖುಷಿ ಆಯ್ತು ಸರ್
ಇನ್ನೂ ಮೂರು ವರ್ಷದಿಂದ ಅನಾರೋಗ್ಯದ ಜೊತೆಗೆ ನಿವೃತ್ತಿ ವೇತನಕ್ಕಾಗಿ ಕಚೇರಿಗೆ ಅಲೆದಾಟ ಮಾಡುತ್ತಿದ್ದ ನಾಗಮ್ಮಾ ಅವರ ಕುಟುಂಬದ ಸದಸ್ಯರಿಗೆ ಈಗ ತುಂಬಾ ಖುಷಿಯಾಗಿದೆ. ಈ ಹಿಂದೆ ಗ್ರಾಮದಲ್ಲಿನ ಜನರ ಬಳಿ ಮಾಡಿದ ಸಾಲದ ಸುಳಿಯ ಜೊತೆಗೆ ಅನಾರೋಗ್ಯದ ಬದುಕಿನ ಜೊತೆಗೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆಸರೆಯಾಗಿದೆ.
ಮೂರು ವರ್ಷದಿಂದ ಕಚೇರಿಗೆ ಅಲೆದರು ಕರುಣೆ ತೋರದ ಅಧಿಕಾರಿಗಳು ಪತ್ರಿಕೆಯಲ್ಲಿ ವರದಿ ಬಂದ ಮೂರೇ ದಿನದಲ್ಲಿ ನಮ್ಮ ಖಾತೆಗೆ ಹಣ ಜಮೆ ಮಾಡಿರುವುದು ಸಂತಸದ ವಿಷಯ ಮತ್ತು ಉದಯವಾಣಿ ಪತ್ರಿಕೆಗೆ ಧನ್ಯವಾದ ಸಲ್ಲಿಸಿದ್ದಾರೆ. “ಸೇವಾ ನಿವೃತ್ತಿ ಹಣಕ್ಕೆ ಮೂರು ವರ್ಷದಿಂದ ಅಲೆದಾಟ’ ವಿಶೇಷ ವರದಿಯನ್ನು ಈಚೆಗೆ ಉದಯವಾಣಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.