Advertisement

ಶೂಟ್‌ ಔಟ್‌ ಮಾಡಿ ಅಲ್ಲ ..!; ವಿವಾದದ ಬಳಿಕ ಸ್ಪಷ್ಟನೆ ನೀಡಿದ ಸಿಎಂ 

11:35 AM Dec 25, 2018 | |

ಬೆಂಗಳೂರು:  ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ನಾಯಕ ಪ್ರಕಾಶರನ್ನು ಹತ್ಯೆ ಮಾಡಿದ ಹಂತಕರನ್ನು ಶೂಟ್‌ ಔಟ್‌ ಮಾಡುವಂತೆ ಫೋನ್‌ ಕರೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೆ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ‘ನಾನು ಉದ್ವೇಗದಲ್ಲಿ ಹೇಳಿಕೆ ನೀಡಿದ್ದೆ. ಅದು ಶೂಟ್‌ಔಟ್‌ ಅಲ್ಲ, ಸ್ಮೋಕ್‌ ಔಟ್‌ ಆಗಬೇಕು. ಈ ಬಗ್ಗೆ ಅಧಿಕಾರಿಗಳಿಗೆ  ಸೂಚನೆ ಕೊಡುತ್ತೇನೆ’ ಎಂದರು.

‘ನಾನು ಮದ್ದೂರಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸುತ್ತೇನೆ. ಅಲ್ಲಿನ ಜನತೆಗೆ ಶಾಂತಿಯಿಂದ ಇರಲು ಮನವಿ ಮಾಡಿದ್ದೇನೆ’ ಎಂದರು.

ಹಾಡಹಗಲೇ ಕೊಲೆ
ಬೆಂಗಳೂರು ಮೈಸೂರು ಹೆದ್ದಾರಿಯ ಮದ್ದೂರಿನ ಟಿ.ಬಿ. ಸರ್ಕಲ್‌ ಬಳಿಯ ತಗ್ಗ ಹಳ್ಳಿ ಚಂದ್ರು ಹೀರೋ ಹೋಂಡಾ ಶೋರೂಂ ಎದುರು ಜೆಡಿಎಸ್‌ ಮುಖಂಡ ಪ್ರಕಾಶ್‌ ಅವರನ್ನು ದುಷ್ಕರ್ಮಿಗಳು ಹಾಡಹಗಲೇ ಹತ್ಯೆ ಮಾಡಿದ್ದಾರೆ.
ಜೆಡಿಎಸ್‌ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಲಲಿತಾ ಅವರ ಪತಿ ಪ್ರಕಾಶ್‌ (50)ಕೊಲೆಯಾದವರು. 2016ರ ಡಿಸೆಂಬರ್‌ 25ರಂದು ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಜೋಡಿ ಕೊಲೆ ಪ್ರಕರಣಕ್ಕೆ ಪ್ರಕಾಶ್‌ ಪ್ರಮುಖ ಸಾಕ್ಷಿದಾರರಾಗಿದ್ದರು.  

Advertisement

ಕೊಲೆ ಬಳಿಕ ವಿಜಯ ಪುರದಲ್ಲಿ ಮಾಧ್ಯಮಗಳ ಕ್ಯಾಮರಾ ಎದುರೇ ಸಿಎಂ ಕೊಲೆ ಮಾಡಿದವರನ್ನು ನಿರ್ದಾಕ್ಷಿಣ್ಯವಾಗಿ ಶೂಟೌಟ್‌ ಮಾಡಿ ಎಂದು  ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದು ರಾಷ್ಟ್ರಾದ್ಯಂತ ಮಾಧ್ಯಮಗಳಲ್ಲಿ  ಸುದ್ದಿಯಾಗಿ ಆಕ್ರೋಶಕ್ಕೆ ಗುರಿಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next