Advertisement
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಬುಮ್ರಾ ಅವರು ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬುಧವಾರ ಡಬ್ಲಿನ್‌ಗೆ ಬಂದ ಬಳಿಕ ತಂಡದ ಸದಸ್ಯರೆಲ್ಲರೂ ಅಭ್ಯಾಸಕ್ಕೆ ಇಳಿದರು.
Related Articles
ಐರ್ಲೆಂಡ್ ವಿರುದ್ಧದ ಸರಣಿಗೆ ತಂಡದಲ್ಲಿ ಜಿತೇಶ್ ಶರ್ಮ ಇರುವ ಕಾರಣ ಸಂಜು ಸ್ಯಾಮ್ಸನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಕಷ್ಟವೆಂದು ಹೇಳಲಾಗಿದೆ. ಈ ಸರಣಿಯಲ್ಲಿ ಅವರ ನಿರ್ವಹಣೆಯ ಆಧಾರದಲ್ಲಿ ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆ ಆಯ್ಕೆಗಾರರು ನಿರ್ಧರಿಸುವ ಸಾಧ್ಯತೆಯಿದೆ.
Advertisement
ವೆಸ್ಟ್‌ಇಂಡೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಕೇವಲ 12, 7 ಮತ್ತು13 ರನ್ ಗಳಿಸಿರುವ ಸ್ಯಾಮ್ಸನ್ ಅವರು ಸಮಸ್ಯೆಯನ್ನು ತಂದೊಡ್ಡಿದ್ದಾರೆ. ಅವರ ಈ ಕಳಪೆ ನಿರ್ವಹಣೆಯಿಂದ ಜಿತೇಶ್ ವಿಕೆಟ್‌ಕೀಪಿಂಗ್ ಕರ್ತವ್ಯವನ್ನು ಪಡೆದರೂ ಯಾವುದೇ ಆಶ್ಚರ್ಯವಿಲ್ಲ. ಬಿರುಸಿನ ಬ್ಯಾಟಿಂಗ್ ನಡೆಸುವ ಜಿತೇಶ್ ಐರ್ಲೆಂಡ್ ವಿರುದ್ಧ ಆಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರಭ್‌ಸಿಮ್ರಾನ್ ಸಿಂಗ್ ಅವರಿಗಿಂತ 29ರ ಹರೆಯದ ಜಿತೇಶ್ ಮುಂಬರುವ ಏಷ್ಯನ್ ಗೇಮ್ಸ್‌ಗೆ ಭಾರತದ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿದ್ದಾರೆ.ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರು ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ವೆಸ್ಟ್‌ಇಂಡೀಸ್ ವಿರುದ್ಧ ಪದಾರ್ಪಣೆಗೈದ ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಿರುವ ತಿಲಕ್ ವರ್ಮ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆಂದು ಖಚತವಾಗಿಲ್ಲ. ಸಾಮ್ಯನ್ ಆಡುವ ಸಾಧ್ಯತೆಯಿದೆ. ಆದರೆ ಶಿವಂ ದುಬೆ ಕೂಡ ಸ್ಪರ್ಧೆಯಲ್ಲಿದ್ದಾರೆ.