Advertisement

ಶಿಕ್ಷಕರ ನೆನೆಯುವುದೇ ಪುಣ್ಯ ಕಾರ್ಯ

04:04 PM Nov 22, 2019 | Naveen |

ತರೀಕೆರೆ: ಶಾಲಾ ದಿನಗಳಲ್ಲಿ ತಮಗೆ ವಿದ್ಯೆಯನ್ನು ಧಾರೆ ಎರೆದ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡು, ಅಂದಿನ ಶಾಲೆಯ ಸಹಪಾಠಿಗಳನ್ನು ಒಂದೆಡೆ ಸೇರಿಸಿ ಶಿಕ್ಷಕರಿಗೆ ಗುರುವಂದನೆಯಾಗಿ ನಮ್ಮನ್ನು ಗೌರವಿಸಿರುವುದು ಸಂತಸ ತಂದಿದೆ ಎಂದು ನಿವೃತ್ತ ಶಿಕ್ಷಕ ಬಾಲಕೃಷ್ಣ ನುಡಿದರು.

Advertisement

ಲಕ್ಕವಳ್ಳಿ ಗ್ರಾಮದಲ್ಲಿರುವ ಗ್ರಾಮ ಜ್ಯೋತಿ ಪ್ರೌಢಶಾಲೆಯಲ್ಲಿ 1996-97 ಸಾಲಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುತ್ತ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊತ್ತುಕೊಂಡು ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ತಮ್ಮಿಂದ ಕಲಿತ ವಿದ್ಯಾರ್ಥಿಗಳು

ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದಾಗ ಮತ್ತು ಉನ್ನತ ಸ್ಥಾನಮಾನವನ್ನು ಸಮಾಜದಲ್ಲಿ ಪಡೆದಾಗ, ಸತ್ಪ್ರಜೆಗಳಾದ ಅಂತಹ ವಿದ್ಯಾರ್ಥಿಗಳು ನನ್ನ ವಿದ್ಯಾರ್ಥಿ ಎಂಬ ಭಾವನೆ ನಮ್ಮಲ್ಲಿ ಮೂಡುತ್ತವೆ ಎಂದರು.

ಗ್ರಾಮ ಜ್ಯೋತಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪೂರೈಸಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇದ್ದಾರೆ. ಅವರಂತೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದವರೂ ಇದ್ದಾರೆ. 23 ವರ್ಷಗಳ ನಂತರ ಎಲ್ಲರೂ ಒಂದೆಡೆ ಕಲೆತು ತಾವು ಕಲಿತ ಶಾಲೆಯ ಶಿಕ್ಷಕರನ್ನು ನೆನಪು ಮಾಡಿಕೊಂಡು ಗೌರವ ಸಲ್ಲಿಸುತ್ತಿರುವುದು ನಮಗೆ ಅನಿರೀಕ್ಷಿತ ಘಟನೆ ಎಂದರು.

ಬಹುಶಃ ಇಂತಹ ಕಾರ್ಯಕ್ರಮಗಳನ್ನು ಹಳೇ ವಿದ್ಯಾರ್ಥಿಗಳು ಮಾಡಬೇಕು. ಈ ರೀತಿ ನಡೆಯುವ ಸಭೆ ಸಮಾರಂಭಗಳಲ್ಲಿ ನಾವು ಭಾಗವಹಿಸಿದಾಗ ನಮಗೆ ಹಳೆಯ ನೆನಪುಗಳು ಮರುಕಳುಹಿಸುತ್ತವೆ. ಆ ನೆನಪುಗಳು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ. ಇಂದಿನ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ಪೂರೈಸಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯವಂತಾಗಲಿ. ಶಿಕ್ಷಕ ಕೇವಲ ತಮ್ಮ ಪಾಠ ಪ್ರವಚನ ಮಾತ್ರ ಮಾಡುವುದಿಲ್ಲ. ಆತನೊಬ್ಬ ಮಾರ್ಗದರ್ಶಕ ಎಂಬುದನ್ನು ಮರೆಯಬಾರದು ಎಂದರು.

Advertisement

ಉಪ ಪ್ರಾಶುಂಪಾಲ ಕೆ.ರಾಜಣ್ಣಗೌಡ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಶಾಲೆಗೆ ಬಂದು ಹೀಗೊಂದು ಅಪರೂಪದ ಕಾರ್ಯಕ್ರಮ ನಡೆಸಬೇಕು ಎಂದಿದ್ದೇವೆ. ನಿಮ್ಮಗಳ ಸಹಕಾರ ನಮಗೆ ಬೇಕು ಎಂದು ಕೇಳಿಕೊಂಡಿದ್ದರು. ಈ ರೀತಿಯ ಕಾರ್ಯಕ್ರಮಗಳು ನಡೆಯುವುದು ಅಪರೂಪ ದಶಕಗಳ ಹಿಂದೆ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಶಾಲೆ ಮತ್ತು ಅಂದು ಶಿಕ್ಷಣವನ್ನು ನೀಡಿದ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡು ಗೌರವ ಸಲ್ಲಿಸುತ್ತಿರುವುದು ವಿಶೇಷ ಎಂದರು.

ಇದೇ ಸಂದರ್ಭದಲ್ಲಿ ಶಾಲೆಗೆ ಹಳೆಯ ವಿದ್ಯಾರ್ಥಿಗಳ ಶಾಲೆಯ ಶ್ರೇಯೋಭಿವೃದ್ಧಿಗಾಗಿ ಕಾಣಿಕೆ ನೀಡಿದ್ದರು. ನಿವೃತ್ತ ಶಿಕ್ಷಕರಾದ ಬಾಲಕೃಷ್ಣ, ಪಿ.ನರಸಿಂಹಭಟ್‌, ಜಿ.ಎಸ್‌.ರಾಮ್‌, ಎನ್‌.ಆರ್‌.ವಿಜಯ್‌, ಕೆ.ಜಿ.ಶ್ರೀನಿವಾಸಮೂರ್ತಿ, ಜಿ.ಶೇಖರ್‌ ನಾಯ್ಕ, ಪ್ರಾಂಶುಪಾಲ ಕೆ. ರಾಜಣ್ಣಗೌಡರ ಅವರನ್ನು ಹಾಗೂ ಶಿಕ್ಷಕರಾದ ಸಿ.ಸೋಮಶೇಖರ್‌, ಬಿ.ರಂಗಪ್ಪ, ಅನಿಲಕುಮಾರ ಜಿ.ಡಿ.ಅವರನ್ನು ಸನ್ಮಾನಿಸಲಾಯಿತು.

1996-97ನೇ ಸಾಲಿನಲ್ಲಿ ಅಧ್ಯಯನ ಮಾಡಿ ಪ್ರಸ್ತುತ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್‌.ಎಂ.ಎಚ್‌. ಮಧು ನಿರೂಪಿಸಿದರು. ಚೈತ್ರಾ ಸ್ವಾಗತಿಸಿದರು. ಎಂ.ಎಚ್‌.ಸಂತೋಷ್‌ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಸ್‌.ಸಂತೋಷ್‌, ರಮ್ಯ, ಮಂಜುನಾಥ ವೈ.ಎಚ್‌., ಮಹಾಲಕ್ಷ್ಮೀ, ವೆಂಕಟೇಶ್‌, ಭಾಸ್ಕರ್‌, ರವಿ, ಕುಮಾರನಾಯ್ಕ, ಅತಾವುಲ್ಲಾ, ನಿಬ್ಬತ್‌ವುಲ್ಲಾಖಾನ್‌, ಭವಾನಿ, ಪ್ರಕಾಶ್‌, ರುಖ್ಮಾನ್‌, ಶಶಿಕುಮಾರ್‌, ಶ್ರೀನಿವಾಸ್‌. ವಿಠ್ಠಲ, ಸುಜಾತಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next