Advertisement

ಕೆಲವರು ನಾನೇ ಸಮರ್ಥ ಎನ್ನುವ ಭ್ರಮೆಯಲ್ಲಿದ್ದಾರೆ : ಸಿಎಂ ಬೊಮ್ಮಾಯಿ ಟಾಂಗ್

03:47 PM May 01, 2022 | Team Udayavani |

ಬೆಂಗಳೂರು: ಹಿಂದುಳಿದ ಮಠಗಳಿಗೆ ಸರ್ಕಾರದದಿಂದ ಅನುದಾನ ಬಿಡುಗಡೆ ಹಿನ್ನೆಲೆ‌ಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದಿಂದ ಕೃತಜ್ಞತೆ ಸಮಾರಂಭ ಭಾನುವಾರ ಕೆಂಗೇರಿಯ ರಾಮಾನುಜ ಮಠದಲ್ಲಿ ನಡೆಯಿತು.

Advertisement

ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಭೈರತಿ ಬಸವರಾಜ್, ಕಾಗಿನೆಲೆ ಗುರು ಪೀಠದ ನಿರಂಜನಾಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ವೇದಿಕೆ ಬರುತ್ತಿದ್ದಂತೆ ಸ್ವಾಮೀಜಿ ಗಳು ಕುಳಿತುಕೊಳ್ಳುವ ದೊಡ್ಡ ಆಸನದಲ್ಲಿ ಕುಳಿತುಕೊಳ್ಳಲು ಸಿಎಂ ಬೊಮ್ಮಾಯಿ ನಿರಾಕರಿಸಿದರು. ನಿರಂಜನಾನಂದಪುರಿ ಸ್ವಾಮೀಜಿ ಒತ್ತಾಯ ಮಾಡಿದರೂ, ಆಸನದಲ್ಲಿ ಕುಳಿತುಕೊಳ್ಳದೆ ಕೊನೆಗೆ ಸಾಮಾನ್ಯ ಆಸನದಲ್ಲಿ ಕುಳಿತುಕೊಂಡರು.
ಸಿಎಂ ಬೊಮ್ಮಾಯಿ ನಡೆಗೆ ಸ್ವಾಮೀಜಿಗಳೆಲ್ಲರೂ ಪ್ರಶಂಸೆ ವ್ಯಕ್ತಪಡಿಸಿ, ಕಾಮನ್ ಮೆನ್ ಸಿಎಂ ಎಂದರು.

ನಾವು ಕೊಟ್ಟಿರುವುದು ಏನೂ ಅಲ್ಲ

ಸಮಾರಂಭದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ”ನಿಮ್ಮೆಲ್ಲರ ಮಾತು ಕೇಳಿ ಹೃದಯ ತುಂಬಿದೆ ಮಾತುಗಳು ಬರುತ್ತಿಲ್ಲ.ತನ್ನದು ಅಂತ ಹೇಳಿಕೊಳ್ಳಲು ಗುರುತಿಲ್ಲದ ಸಮುದಾಯಗಳು ಅವರ ಪರವಾಗಿ ಧ್ವನಿ ಎತ್ತಲು, ನಿಮ್ಮ ಗುರಿ ಸರ್ವಸ್ವವನ್ನ ತಾಗ್ಯ ಮಾಡಿರುವುದು ಸಾಮಾನ್ಯದ ಮಾತಲ್ಲ.ಎನ್ನಿಲ್ಲದ ಸಮುದಾಯಕ್ಕೆ ಮಠ ಕಟ್ಟಿ ಏನಾದರೂ ಕೊಡಬೇಕು ಅನ್ನುವ ಸಾಹಸಕ್ಕೆ ಕೈ ಹಾಕಿದ್ದೀರಿ.ಇಂತಹ ದೊಡ್ಡ ಕೆಲಸಕ್ಕೆ ನೀವು ಕೈಹಾಕಿದ್ದೀರಿ, ಇದು ಅಮೋಘವಾದ ಕೆಲಸ. ಇಂತಹ ಕೆಲಸಕ್ಕೆ ನಮ್ಮ ಸರ್ಕಾರದಿಂದ ಕೊಟ್ಟಿರುವುದು ಏನೂ ಅಲ್ಲ ಎನ್ನುವುದು ನನ್ನ ಭಾವನೆ” ಎಂದರು.

Advertisement

”ಒಂದು ಕುಟುಂಬವೂ ಸಹ ಸ್ವಾವಲಂಬನೆಯಿಂದ ಬದುಕಬೇಕು. ಇವತ್ತು ಸಾಮರ್ಥ್ಯದದ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ನಾನೇ ಸಮರ್ಥ ಎನ್ನುವ ಭ್ರಮೆಯಲ್ಲಿದ್ದಾರೆ. ಇದು ಜನರ ಸಾಮರ್ಥ್ಯ, ಅದಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಸಬ್ ಕಾ ಸಥ್ ಸಬ್ ಕಾ ವಿಕಾಸ್ ತತ್ವದ ಅಡಿಯಲ್ಲಿ ನಾವು ಕೆಲಸ ಮಾಡುತ್ತೀದ್ದೇವೆ. ಶಕ್ತಿ ಇಲ್ಲದವನಿಗೆ ಶಕ್ತಿ ತುಂಬುವುದು ಸಾಮರ್ಥ್ಯ. ಆರ್ಥಿಕವಾಗಿ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸವನ್ನ ನಾನು ಮಾಡುತ್ತಿದ್ದೇನೆ. ನಾನು ಮಾಡುತ್ತಿರುವ ಸಾಮರ್ಥ್ಯ, ಸೂರಿಲ್ಲದವರಿಗೆ ಸೂರನ್ನ, ವಿದ್ಯೆ ಇಲ್ಲದವರಿಗೆ ವಿದ್ಯೆಯನ್ನ ಕೊಡುವುದೇ ಸಾಮರ್ಥ್ಯ ಎಂದು ತಿಳಿದಿದ್ದೇನೆ” ಎಂದರು.

”ಮಾತಿನಿಂದ ಅಳೆಯಬೇಡಿ, ಕೃತಿಯಿಂದ ನಮ್ಮನ್ನ ಅಳೆಯಿರಿ. ನಮ್ಮ ರಿಪೋರ್ಟ್ ಕಾರ್ಡ್ ಜನತೆಯ ಮುಂದೆ ಇಟ್ಟು ನಾವು ಓಟ್ ಕೇಳುತ್ತೇವೆ. ಕೆಲಸವನ್ನ ನೋಡಿ ಆಶೀರ್ವಾದ ಮಾಡಿ. ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಿದ್ದೇವೆ. ಹಿಂದಿನ ಯಾವ ಸರ್ಕಾರವೂ ಕೊಟ್ಟಿರಲಿಲ್ಲ. ಸಂಧ್ಯಾ ಸುರಕ್ಷತಾ ಯೋಜನೆಯಡಿ ವಿಧವಾ ವೇತನ, ವೃದ್ಧಾಪ್ಯ ವೇತನ ಹೆಚ್ಚಿಗೆ ಮಾಡಿದ್ದೇವೆ. ಇದು ಸಾಮರ್ಥ್ಯ ಅಲ್ವಾ? ಆರ್ಥಿಕತೆ ಅಂದರೆ ಹಣ ಅಲ್ಲ. ನನ್ನ ಪ್ರಕಾರ ಆರ್ಥಿಕತೆ ಎಂದರೆ ದುಡಿಮೆ. ದುಡಿಮೆಯೇ ದೊಡ್ಡಪ್ಪ” ಎಂದರು.

”ಎಲ್ಲಾ ಶಾಲಾ ಕಟ್ಟಡಕ್ಕೆ ವಿಶೇಷ ಅನುದಾನ ನೀಡಿದ್ದೇನೆ. ನಾನು ಸುಮ್ಮನೆ ಕೂತಿಲ್ಲ, 90 % ಎಲ್ಲದಕ್ಕೂ ಆದೇಶ ಕೊಟ್ಟಿದ್ದೇನೆ. ಧಾರವಾಡ, ಮೈಸೂರು ಜಿಲ್ಲೆಯಲ್ಲಿವ 1000 ಸಾವಿರ ದಲಿತ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳನ್ನ ನೀಡಿದ್ದೇವೆ. ಎಲ್ಲಾ ಕಾರ್ಯಕ್ರಮಗಳನ್ನ ಎಲ್ಲಾ ವರ್ಗದವರಿಗೆ ಮಾಡಿದ್ದೇವೆ, ಇದಕ್ಕೆಲ್ಲಾ ನಿಮ್ಮ ಆಶೀರ್ವಾದ ಇರಲಿ. ಮಠದಲ್ಲಿ, ಹಾಸ್ಟೆಲ್ ‌ನಲ್ಲಿ ಊಟ ಮಾಡಿ ದೊಡ್ಡ ದೊಡ್ಡ ಆಫೀಸರ್ ಆಗಿದ್ದಾರೆ. ಮಠಗಳು ಇರುವುದರಿಂದ ಮುಂದೆ ಬಂದಿದ್ದಾರೆ. ಮಠಗಳು ಇರದೇ ಇದ್ರೆ ಏನಾಗುಗ್ತಾ ಇತ್ತು? ಇವತ್ತು ತಕ್ಕಡಿಯೂ ಮೇಲೆ ಏರ್ಬೇಕು ಅಲ್ವಾ” ಎಂದರು.

”ಸಾಮಾಜಿಕ ನ್ಯಾಯ ಕೇವಲ ಭಾಷಣದ ವಸ್ತುವಾಗಿದೆ. ಭಾಷಣ‌ ಮಾಡಿದ್ದೀರಾ ಅಲ್ವಾ, ಇದುವರೆಗೂ ಯಾರಿಗೆ ಕೊಟ್ಟಿದೀರಿ ಸಾಮಾಜಿಕ ನ್ಯಾಯ.ಮಠಗಳು ವಿದ್ಯೆಯ ಜೊತೆಗೆ ಸಂಸ್ಕಾರವನ್ನ ನೀಡಿದ್ದಾರೆ. ಹಾಗಾಗಿ ನಾವು ಸಹಾಯವನ್ನ ಮಾಡಿದ್ದೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next