Advertisement
ಓದಿ : ಒಂದು ಅಪರೂಪದ ಸಂದರ್ಶನ; ಯುವ ಧೋನಿ ವರ್ಸಸ್ ನಿವೃತ್ತ ಧೋನಿ!
Related Articles
Advertisement
ಟೆಲಿವಿಷನ್ ಮತ್ತು ಸಿನಿಮ ಜಗತ್ತಿನಲ್ಲಿ ಡಬ್ಬಿಂಗ್ ಎನ್ನುವುದು ಬಹುಮುಖ್ಯ ಅಂಗವಾಗಿ ಗುರುತಿಸಿಕೊಂಡಿದೆ. ಕನ್ನಡದಲ್ಲಿ ಡಬ್ಬಿಂಗ್ ಅವಶ್ಯಕತೆ ಕುರಿತಾಗಿ ಈಗಾಗಲೆ ಹಲವು ವರ್ಷಗಳಿಂದ ಪರ-ವಿರೋಧ ಚರ್ಚೆಗಳು ಸಾಕಷ್ಟು ನಡೆದಿವೆ ಹಾಗೂ ಇಂದಿಗೂ ನಡೆಯುತ್ತಲೇ ಇದೆ. ಕಳೆದ ಹತ್ತು ವರ್ಷಗಳಲ್ಲಿ ಈ ಬಗ್ಗೆ ಪರಿಣಾಮಕಾರಿ ಹೋರಾಟಗಳು ನಡೆದು ಕನ್ನಡದಲ್ಲಿ ಡಬ್ಬಿಂಗ್ ಸಂಸ್ಕೃತಿ ಮೆಲ್ಲನೆ ಆವರಿಸಿಕೊಳ್ಳುತ್ತಿದೆ. ಕನ್ನಡ ಭಾಷೆಗೆ ಡಬ್ಬಿಂಗ್ ಅಗತ್ಯ ಎಷ್ಟರ ಮಟ್ಟಿಗೆ ಯಾವ ಬಗೆಯಲ್ಲಿ ಬೇಕೆಂಬ ಬಗ್ಗೆ ಅವಲೋಕನ ಮಾಡಿಕೊಳ್ಳುವ ಕಾಲ ಬಂದೊದಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡದ ಒಂದೆರಡು ಖಾಸಗಿ ಚಾನೆಲ್ ಗಳಲ್ಲಿ ಪ್ರತೀ ವಾರದ ಅಂತ್ಯದಲ್ಲಿ ಪಕ್ಕದ ರಾಜ್ಯದ ತೆಲುಗು, ತಮಿಳು ಚಿತ್ರರಂಗದ ಪರಭಾಷೆಯ ಸಿನೆಮಾಗಳನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಒಂದು ಹಂತದಲ್ಲಿ ಅನ್ಯ ಭಾಷಾ ಚಿತ್ರಗಳನ್ನು ಕನ್ನಡ ಭಾಷೆಯಲ್ಲಿಯೇ ನೋಡಬೇಕು ಎಂದು ಡಬ್ಬಿಂಗ್ ಗಾಗಿ ಹಂಬಲಿಸುತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಇದು ಹಬ್ಬದಂತಾಗಿದೆ.
ತೀರ ಮನರಂಜನೆ, ವಾಣಿಜ್ಯ ಸಿನೆಮಾಗಳು ಡಬ್ಬಿಂಗ್ ಮೂಲಕ ಕನ್ನಡದ ಮುಖವಾಡ ಹೊತ್ತು ನಮ್ಮ ರಾಜ್ಯದಲ್ಲಿ ಹೆಸರು ಮಾಡುತ್ತಿದೆ.
ಅಷ್ಟೇ ಅಲ್ಲದೆ ಅನ್ಯ ಭಾಷೆಯ ಧಾರವಾಹಿಗಳು ಕನ್ನಡ ಭಾಷೆಗೆ ಅನುವಾದಗೊಂಡು ಪ್ರಸಾರವಾಗುತ್ತಿದೆ. ಈ ಬಗ್ಗೆ ಟಿ ಆರ್ ಪಿ ಹೆಚ್ಚಳವಾಗಿದ್ದು ಅರಿತು, ಇನ್ನಷ್ಟು ಧಾರವಾಹಿ ಸಿನೆಮಾಗಳು ಕನ್ನಡಕ್ಕೆ ಡಬ್ಬಿಂಗ್ ಆಗುವ ಹೊಸ್ತಿಲಿನಲ್ಲಿವೆ. ಕನ್ನಡಕ್ಕೆ ಡಬ್ಬಿಂಗ್‌ನ್ನು ವಿರೋಧಿಸಿ ಈ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದವರಿಗೆ ಪ್ರೇಕ್ಷಕರ ಆಯ್ಕೆಯನ್ನು ಕಿತ್ತುಕೊಳ್ಳಲಾಗದು ಎಂದು ತೀರ್ಪು ನೀಡಿದೆ. ಇನ್ನೂ ಹೇಗಿದ್ದರೂ ಡಬ್ಬಿಂಗ್ ನ್ನು ತಡೆಯಲು ಅಸಾಧ್ಯ. ಮಾತೃ ಭಾಷೆಯಲ್ಲಿ ಜಗತ್ತಿನ ಜ್ಞಾನ ಮನರಂಜನೆಯನ್ನು ಪಡೆಯುವುದು ಪ್ರತೀಯೊಬ್ಬ ಪ್ರಜೆಯ ಹಕ್ಕು ಎಂದು ಯುನೆಸ್ಕೊ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಬೇಕಾಬಿಟ್ಟಿ ಡಬ್ಬಿಂಗ್ ಹೇರುವ ಮೂಲಕ ಪ್ರೇಕ್ಷಕ ವರ್ಗಕ್ಕೆ ವಾಕರಿಕೆ ಬರದಂತೆ ಮಾಡದೇ ಉತ್ತಮ ಗುಣಮಟ್ಟದ ಸಿನೆಮಾ ಧಾರವಾಹಿ, ಕಂಟೆಂಟ್ಗ ಳು ಬರಲಿ ಎಂಬುದು ನಮ್ಮ ಸದಾಶಯವಾಗಿದೆ.