ಬೆಂಗಳೂರು: ಐಪಿಎಲ್ ನ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅವರು ಫ್ರಾಂಚೈಸಿಯನ್ನು ತೊರೆದ ಬಳಿಕ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಧನ್ಯವಾದ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ ಕೂ ನಲ್ಲಿ ಕನ್ನಡದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿರುವ ರಾಹುಲ್, “ಇದೊಂದು ಉತ್ತಮ ಪಯಣವಾಗಿತ್ತು, ನಿಮ್ಮ ಪ್ರೀತಿಗೆ ಧನ್ಯವಾದಗಳು ಮತ್ತೊಮ್ಮೆ ಭೇಟಿಯಾಗೋಣ” ಎಂದು ಬರೆದು ಕೊಂಡಿದ್ದಾರೆ.
ಇದನ್ನೂ ಓದಿ:ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್‌ನ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಂಗಳವಾರ ಸಲ್ಲಿಸಿತ್ತು. ಪಂಜಾಬ್ ಕಿಂಗ್ಸ್ ತಂಡವು ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ವೇಗಿ ಅರ್ಶದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿದೆ.
Related Articles
ಪಂಜಾಬ್ ಕಿಂಗ್ಸ್ ನ ನಾಯಕ ಕೆ.ಎಲ್.ರಾಹುಲ್ ರನ್ನು ಫ್ರಾಂಚೈಸಿ ಉಳಿಸಿಕೊಂಡಿಲ್ಲ. ಈ ಬಗ್ಗೆ ಮಾತನಾಡಿರುವ ಕೋಚ್ ಅನಿಲ್ ಕುಂಬ್ಳೆ,” ನಾವು ಕೆ.ಎಲ್.ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು. ಅದಕ್ಕಾಗಿಯೇ ಅವರನ್ನು ನಾವು ನಾಯಕರನ್ನಾಗಿ ಮಾಡಿದ್ದೆವು. ಆದರೆ ಅವರು ತಂಡದಲ್ಲಿ ಉಳಿಯಲು ಬಯಸಿಲ್ಲ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ” ಎಂದು ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವು ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ಮತ್ತು ಅರ್ಶದೀಪ್ ಸಿಂಗ್ ಅವರನ್ನು 4 ಕೋಟಿ ರೂ. ಗೆ ತಂಡದಲ್ಲಿ ಉಳಿಸಿಕೊಂಡಿದೆ.