ನವ ದೆಹಲಿ : ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿಯವರನ್ನು ನಿನ್ನೆ(ಮಂಗಳವಾರ) ವಜಾಗೊಳಿಸಲಾಯಿತು. ಹುದ್ದೆಯಿಂದ ಹೊರ ಬಂದ ಕಿರಣ್ ಬೇಡಿ, ತಮ್ಮ ಟ್ವೀಟರ್ ಖಾತೆಯಲ್ಲಿ ಭಾರತೀಯ ಸರ್ಕಾರಕ್ಕೆ, ಸಾರ್ವಜನಿಕ ಅಧಿಕಾರಿಗಳಿಗೆ, ಪುದುಚೆರಿ ಜನರಿಗೆ, ಧನ್ಯವಾದ ಸಮರ್ಪಿಸಿದ್ದಾರೆ.
ರಾಜ್ ನಿವಾಸ್ ನಲ್ಲಿ ನನ್ನೊಂದಿಗೆ ನನ್ನ ತಂಡ ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸಿದೆ ಎಂದು ಕಿರಣ್ ಬೇಡಿ ಪ್ರತಿಪಾದಿಸಿದ್ದಾರೆ.
ಓದಿ : ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಗೋಕಾಕ್ ಕಿಂಗ್ ಪಿನ್ ಅಂದರ್
“ಏನೆ ಮಾಡಿದರೂ, ಅದು ನನ್ನ ಸಾಂವಿಧಾನಿಕ ನೈತಿಕ ಜವಾಬ್ದಾರಿಯ ಪವಿತ್ರ ಕರ್ತವ್ಯ” ಎಂದು ಟ್ವೀಟ್ ನಲ್ಲಿ ಬೇಡಿ ಹಂಚಿಕೊಂಡಿದ್ದಾರೆ.
Related Articles
ಇನ್ನು ಕಿರಣ್ ಬೇಡಿ ಪುದುಚೆರಿ ಸರ್ಕಾರದೊಂದಿಗೆ ಹಾಗು ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿಯವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.
ಅದಲ್ಲದೇ, ಕಾಂಗ್ರೆಸ್ ಹಿರಿಯ ಶಾಸಕ ಮಲ್ಲಾಡಿ ಕೃಷ್ಣ ರಾವ್ ಅವರು ಕೇಂದ್ರ ಆಡಳಿತ ಪ್ರದೇಶಕ್ಕೆ ಹಸ್ತಕ್ಷೇಪ ಮಾಡಿದ್ದಾರೆಂದು ಆರೋಪಿಸಿ ಬೇಡಿ ಅವರನ್ನು ಬದಲಿಸುವಂತೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಒತ್ತಾಯಿಸಿದ್ದರು.
ಓದಿ : ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ..! ಸುಳಿವು ನೀಡಿದ ಶಿವ ಸೇನೆ