Advertisement
ರೆ| ಫಾ| ಪ್ರಕಾಶ್ ಮೊರಾಯಸ್ ಸಿದ್ಧಕಟ್ಟೆ ಅವರು ಸಂಭ್ರಮಿಕ ಕೃತಜ್ಞತ ದಿವ್ಯಪೂಜೆ ನೆರವೇರಿಸಿ ಭತ್ತದ ತೆನೆ, ಪೈರುಗಳನ್ನು ಆಶೀರ್ವದಿಸಿ ಮಾತನಾಡಿ, ಶ್ರಮಕ್ಕೆ ಪ್ರತಿಫಲ ನೀಡಿದ ಪ್ರಕೃತಿಮಾತೆಯನ್ನು ಅಭಿವಂದಿಸುವ ಸಂಭ್ರಮವೇ ಮೊಂತಿಹಬ್ಬ. ಈ ಉತ್ಸವವು ಏಸುಕ್ರಿಸ್ತರ ತಾಯಿ ಮಾತೆ ಮರಿಯಮ್ಮರ ಹುಟ್ಟುಹಬ್ಬದ ಮೂಲಕ ಅಖಂಡ ಕುಟುಂಬವನ್ನೇ ಒಗ್ಗೂಡಿಸುವ ಸುದಿನವೂ ಹೌದು. ಆದ್ದರಿಂದ ತೆನೆಹಬ್ಬ ಮಾನವಕುಲಕ್ಕೆ ಸಮೃದ್ಧಿಯ ಪ್ರಸಾದವಾಗಿ ಪರಿಗಣಿಸಲಾತ್ತಿದೆ. ಪ್ರಭು ಏಸುಕ್ರಿಸ್ತರ ಜನನಿದಾತೆ ಕನ್ಯಾಮರಿಯಮ್ಮರ ಜನ್ಮೋತ್ಸವವನ್ನು ಕುಟುಂಬ ಸದಸ್ಯರೆಲ್ಲರೂ ಒಗ್ಗೂಡಿ ಸಂಭ್ರಮಿಸಿದರೆ ಮಾತ್ರ ಹಬ್ಬವು ಅರ್ಥಪೂರ್ಣ. ಇಂತಹ ಪಾವಿತ್ರ್ಯತೆಯ ಹಬ್ಬ ಎಲ್ಲರ ಹೊಣೆಯಾಗಿದೆ ಎಂದು ನುಡಿದು ಶುಭಹಾರೈಸಿದರು.ಫಾ| ಗ್ಲೆನ್ ಡಿಮೆಲ್ಲೋ ಪೂಜೆಯಲ್ಲಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸೈಂಟ್ ಜೋನ್ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಕ್ಲೆಮೆಂಟ್ ಡಿಲಿಮಾ, ಸಹಾಯಕ ಗುರು ರೆ| ಫಾ| ಎಸ್.ಲೊನಪ್ಪನ್, ರೆ| ಫಾ| ಪ್ಯಾಟ್ರಿಕ್ ಡಿಮೆಲ್ಲೋ, ಫಾ| ಗ್ಲೆನ್ ಡಿಮೆಲ್ಲೋ, ಕೊಂಕಣಿ ಭಾಷಾ
ಮಂಡಳ್ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿಯ ಸದಸ್ಯ ಅನಂತ ಅಮ್ಮೆಂಬಳ್, ಸಮಾಜ ಸೇವಕ ಗೋಡ್ ಫ್ರಿ ಪಿಮೆಂಟಾ, ಮರಾಠಿ ಅಸೋಸಿಯೇಶನ್ನ ಜ್ಯೂಲಿ ಶಿಂಧೆ, ಸಂಗೀತಕಾರ ಪ್ರಶಾಂತ್ ಸೆರಾವೋ, ಸಬೆಸ್ಟಿಯನ್ ಫೆರ್ನಾಂಡಿಸ್, ಸವಿಯೋ ಡಿಸೋಜಾ, ಪೀಟರ್
ಲೋಪೆಸ್ ಹಾಗೂ ಸ್ಟೇಫನ್ ಲೂಯಿಸ್ ಮೊದಲಾದವರು ಉಪಸ್ಥಿತರಿದ್ದರು. ಸಾಂ. ಜುವಾಂವ್ (ಸೈಂಟ್ ಜೋನ್) ಕೊಂಕಣಿ ಸಮುದಾಯ ಸಂಸ್ಥೆಯ ಅಧ್ಯಕ್ಷ ಆಗಸ್ಟಿನ್ ಸುವಾರಿಸ್, ಉಪಾಧ್ಯಕ್ಷೆಯರಾದ ಸುನೀತಾ ಸುವಾರಿಸ್ ಮತ್ತು ಜೆಸ್ಸಿ ಫೆರ್ನಾಂಡಿಸ್, ಕಾರ್ಯದರ್ಶಿ ಮೇರಿ ಫೆರ್ನಾಂಡಿಸ್, ಜೊತೆ ಕಾರ್ಯದರ್ಶಿ ತೋಮಾಸ್ ಪಿರೇರಾ, ಕೋಶಾಧಿಕಾರಿ ಜೇಮ್ಸ್ ಡೆಸಾ, ಜೊತೆ ಕೋಶಾಧಿಕಾರಿ ಕ್ಲೆಮೆಂಟ್ ಡಿಸಿಲ್ವಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಐಡಾ ಪಿಂಟೋ, ರೊಬಿನ್ ರೋಡ್ರಿಗಸ್, ರೀಟಾ ಡಿಸೋಜಾ, ಕ್ಲೋಡಿ ಮೊಂತೇರೊ ಮೊಡಂಕಾಪು, ತೆಲ್ಮಾ ಡೆಸಾ, ಲೀನಾ ಲಸ್ರಾದೊ, ವಿಲ್ಫೆಫ್ರಿಡ್ ಮಸ್ಕರೇನ್ಹಾಸ್, ತೋನ್ಸೆ ಲಾರೇನ್ಸ್ ಡಿಸೋಜಾ, ಸುನೀತಾ ಎ. ಸುವಾರೆಸ್, ಬ್ರ| ಲಾರೇನ್ಸ್ ಡಿಸೋಜಾ ಮರೋಲ್, ಎಲಿಯಸ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಅತಿಥಿಗಳು ಕಾರ್ಯಕ್ರಮ ಸಂಸ್ಥೆಯ ಸಂಘಟಕರಿಗೆ, ಪ್ರತಿಭಾನ್ವಿತರಿಗೆ ಪುಷ್ಪಗುಚ್ಚವನ್ನಿತ್ತು ಗೌರವಿಸಿ ಶುಭಹಾರೈಸಿದರು.
Related Articles
Advertisement
ಚಿತ್ರ-ವರದಿ : ರೋನ್ಸ್ ಬಂಟ್ವಾಳ್