Advertisement
ಡಿ. 19ರಂದು ಥಾಣೆ ಪಶ್ಚಿಮದ ಕಾಶೀನಾಥ್ ಘಾಣೇಕರ್ ಸಭಾಗೃಹದಲ್ಲಿ ನಡೆದ ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಕತ್ವದ ಶ್ರೀ ಆದಿಶಕ್ತಿ ಕನ್ನಡ ಶಾಲೆಯ 43 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.
Related Articles
Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಅವರು ಮಾತನಾಡಿ, 43 ವರ್ಷದ ಇತಿಹಾಸಹೊಂದಿರುವ ಶ್ರೀ ಆದಿಶ+ಕ್ತಿ ಕನ್ನಡ ಸಂಘ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾದ ಸ್ಥಾಪಕರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಶಿಕ್ಷಕವೃಂದದವರು ಹಾಗೂ ಮಹಾನ್ ದಾನಿಗಳ ಶ್ರಮ, ಪ್ರೀತಿ, ವಿಶ್ವಾಸ ಅವಿಸ್ಮರಣೀಯವಾಗಿದೆ. ಈ ಶಾಲೆಯು ಮುಂದಿನ ದಿನಗಳಲ್ಲೂ ಶತಪ್ರತಿಶತ ಫಲಿತಾಂಶ ಪಡೆದು ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳಗಲಿ ಎಂದು ಶುಭಹಾರೈಸಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಬಿ. ಅವರು ಸ್ವಾಗತಿಸಿದರು. ಮಾಧ್ಯಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ ಅವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.
ಅತಿಥಿ-ಗಣ್ಯರುಗಳನ್ನು ಸಹಶಿಕ್ಷಕರುಗಳಾದ ಸುಜಯ ಜೈನ್, ನಳಿನಾಕ್ಷೀ ಸಂತೋಷ್ ದೊಡ್ಮನೆ, ಶರ್ಮಿಳಾ ಶೆಟ್ಟಿ ಅವರು ಪರಿಚಯಿಸಿದರು.
ಶಾಲಿನಿ ಶೆಟ್ಟಿ ಮತ್ತು ಪ್ರಕಾಶ್ ಚಿಂತಾಮಣಿ ಅವರು ವಾಚಿಸಿದರು.2017-2018 ನೇ ಶೈಕ್ಷಣಿಕ ಸಾಲಿನ ವಿಭಾಗದಲ್ಲಿ ಸಾಧನೆಗೈದ ಶಾಲಾ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಸುಜಯಾ ಜೈನ್ ಮತ್ತು ಮಮತಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ವೇದಿಕೆಯಲ್ಲಿ ಶ್ರೀ ಆದಿಶಕ್ತಿ ಕನ್ನಡ ಸಂಘದ ಗೌರವ ಕಾರ್ಯದರ್ಶಿ ವಾದಿರಾಜ್ ಶೆಟ್ಟಿ, ಕೋಶಾಧಿಕಾರಿ ಮನೋಹರ ಅಂಚನ್, ಜತೆ ಕಾರ್ಯದರ್ಶಿ ಹರೀಶ್ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಏಕನಾಥ್ ಕುಂದರ್ ಅವರು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಪ್ರಮೋದಾ ಮಾಡಾ ಅವರು ನಿರ್ವಹಿಸಿದರು. ಅತಿಥಿಗಳ ಯಾದಿಯನ್ನು ಆಶಾ ಶೆಟ್ಟಿ ಓದಿದರು. ಸಹಶಿಕ್ಷಕಿ ಪುಷ್ಪಾ ಕುಂಬಳೆ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.