Advertisement

ಲೀಟರ್‌ ಪೆಟ್ರೋಲ್‌ಗೆ ಕೇವಲ 1 ರೂ.!

02:24 AM Apr 26, 2022 | Team Udayavani |

ಥಾಣೆ: ತೈಲ ದರ ಏರಿಕೆಯು ಜನಸಾಮಾನ್ಯನ ಜೇಬನ್ನು ಸುಡುತ್ತಿರುವಾಗಲೇ ಕೇವಲ 1 ರೂ.ಗೆ ಲೀಟರ್‌ ಪೆಟ್ರೋಲ್‌ ಸಿಕ್ಕಿದರೆ ಹೇಗಾಗಬೇಡ?

Advertisement

ಮಹಾರಾಷ್ಟ್ರದ ಥಾಣೆಯ ಕೈಲಾಶ್‌ ಪೆಟ್ರೋಲ್‌ ಪಂಪ್‌ ಸೋಮವಾರ ಎಲ್ಲ ಗ್ರಾಹಕರಿಗೂ ಕೇವಲ 1 ರೂ. ಗೆ ಪೆಟ್ರೋಲ್‌ ಮಾರಾಟ ಮಾಡಿದೆ.

ಇದು ಕೇವಲ ಒಂದು ದಿನದ ಆಫ‌ರ್‌ ಆಗಿತ್ತಷ್ಟೆ. ಸ್ಥಳೀಯ ಶಿವಸೇನೆ ಶಾಸಕ ಪ್ರತಾಪ್‌ ಸರ್‌ನಾಯ್ಕ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೋಮವಾರದಂದು ಶಿವಸೇನೆ ಕಾರ್ಯಕರ್ತರು ಗ್ರಾಹಕರಿಗೆ 1 ರೂ. ಬೆಲೆಯಲ್ಲಿ ಪೆಟ್ರೋಲ್‌ ಮಾರಿದ್ದರು.

ಜನ್ಮದಿನಾಚರಣೆ ಜತೆ ಪ್ರತಿಭಟನ ಸೂಚಕವಾಗಿಯೂ ಈ ಆಫ‌ರ್‌ ನೀಡಲಾಗಿತ್ತೆಂದು ಶಿವಸೇನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next