Advertisement

ಥಾಣೆ ನವೋದಯ ಕನ್ನಡ ಸೇವಾ ಸಂಘ: “ಕುರುಕ್ಷೇತ್ರದಲ್ಲಿ ಕೌರವ’ತಾಳಮದ್ದಳೆ 

11:17 AM Oct 05, 2021 | Team Udayavani |

ಥಾಣೆ: ನಾಡು-ನುಡಿ, ಕಲೆಯ ಬಲವರ್ಧನೆಗೆ ಸದಾ ಶ್ರಮಿಸುತ್ತಿರುವ ಪ್ರತಿಷ್ಠಿತ ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ಸಂಯೋಗದೊಂದಿಗೆ, ಅಜೆ ಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ  ಕುರುಕ್ಷೇತ್ರದಲ್ಲಿ ಕೌರವ ಯಕ್ಷಗಾನ ತಾಳಮದ್ದಳೆ ಅ. 3ರಂದು ಅಪರಾಹ್ನ ಸಂಘದ ನವೋದಯ ಸದನದ ಸಭಾಗೃಹದಲ್ಲಿ  ನಡೆಯಿತು. ನವೋದಯ ಕನ್ನಡ ಸೇವಾ ಸಂಘದ ನೂತನ ಅಧ್ಯಕ್ಷ ದಯಾನಂದ್‌ ಎಸ್‌. ಶೆಟ್ಟಿ  ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಅರ್ಥಧಾರಿ ದಿನೇಶ್‌ ಶೆಟ್ಟಿ ಕಾವಳೆಕಟ್ಟೆ  ಮಾತನಾಡಿ, ಕೊರೊನಾ ಸಂದರ್ಭದಲ್ಲೂ ಊರಿನ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಂತಹ ಮುಂಬಯಿ ಯ ಎಲ್ಲ  ಸಂಘಟನೆಗಳು, ಕಲಾ ಪೋಷಕರು, ಕಲಾ ಸಂಘಟಕರು ಹಾಗೂ ಕಲಾಪ್ರೇಮಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಅಜೆಕಾರು ಕಲಾಭಿಮಾನಿ ಬಳಗವು ನಗರದಲ್ಲಿ ಸ್ತಬ್ಧಗೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತೆ ಜೀವಕಳೆ ನೀಡಿದೆ. ಕಲೆ ಮತ್ತು ಕಲಾವಿದರಿಗೆ ಮುಂಬಯಿ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಅಪಾರವಾಗಿದೆ. ನಿಮ್ಮ ಹೃದಯ ಶ್ರೀಮಂತಿಕೆಗೆ ಋಣಿಯಾಗಿದ್ದೇವೆ. ನವೋ

ದಯ ಕನ್ನಡ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ವರಿಗೂ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಇನ್ನು ಮುಂದೆಯೂ ಹೀಗೆಯೆ ಲಭಿಸುವಂತಾಗಲಿ ಎಂದು ಆಶಿಸಿದರು.

ಥಾಣೆ ನವೋದಯ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷ ಜಯ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕೆ. ಎಸ್‌. ಬಂಗೇರ, ಕೆ. ಎಸ್‌. ರಾವ್‌, ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್‌ ಎಸ್‌. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ದಯಾನಂದ್‌ ಹೆಗ್ಡೆ, ಉಪಾಧ್ಯಕ್ಷ ಶಶಿಧರ್‌ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಶಾಂತ್‌ ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ಕೀರ್ತಿ ಎಸ್‌. ಶೆಟ್ಟಿ, ಸಮಿತಿ ಸದಸ್ಯರಾದ ರವಿ ಹೆಗ್ಡೆ ಹೆರ್ಮುಂಡೆ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ  ಅಜೆಕಾರು, ಕಾಲೇಜಿನ ಪ್ರಾಂಶುಪಾಲೆ ಡಾ| ಉಷಾವತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಲಾವಿದರನ್ನು ಹಾಗೂ ಅತಿಥಿ -ಗಣ್ಯರ ನ್ನು ಸಂಸ್ಥೆಯ ಪರವಾಗಿ ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷ ದಯಾನಂದ ಎಸ್‌. ಶೆಟ್ಟಿ  ಪುಷ್ಪಗುತ್ಛವನ್ನಿತ್ತು ಗೌರವಿಸಿ ಸ್ವಾಗತಿಸಿದರು.

Advertisement

ಬಳಿಕ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಬಾಲಕೃಷ್ಣ ಶೆಟ್ಟಿ  ಸಾರಥ್ಯದಲ್ಲಿ  ಜರಗಿದ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ದೇವಿಪ್ರಸಾದ್‌ ಆಳ್ವ ತಲಪಾಡಿ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು, ಮುಮ್ಮೇಳದಲ್ಲಿ ಅರ್ಥಧಾ ರಿಗಳಾಗಿ ಜಯಪ್ರಕಾಶ್‌ ಶೆಟ್ಟಿ  ಪೆರ್ಮುದೆ, ಹರೀಶ್‌ ಭಟ್‌ ಬೊಳಂತಿಮೊಗರು, ದಿನೇಶ್‌ ಶೆಟ್ಟಿ  ಕಾವಳಕಟ್ಟೆ, ಸದಾಶಿವ ತಲಪಾಡಿ, ಪ್ರಸಾದ್‌ ಸವಣೂರು ಮೊದಲಾದವರು ಭಾಗವಹಿಸಿದ್ದರು.

ನವೋದಯ ಕನ್ನಡ ಸಂಘದ ಸದಸ್ಯರು, ನವೋದಯ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ತುಳು-ಕನ್ನಡಿಗರು, ಕಲಾಭಿಮಾನಿಗಳು, ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next