Advertisement

ಥಾಣೆ: ಉದ್ಧವ್‌ ಅವರಿಂದ 1 ಸಾವಿರ ಹಾಸಿಗೆಗಳ ಕೋವಿಡ್‌ ಆಸ್ಪತ್ರೆ ಉದ್ಘಾಟನೆ

10:12 AM Jun 18, 2020 | mahesh |

ಥಾಣೆ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಥಾಣೆಯ 1,000 ಹಾಸಿಗೆಗಳ ಕೋವಿಡ್-19 ಆಸ್ಪತ್ರೆಯನ್ನು ಬುಧವಾರ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಉದ್ಘಾಟಿಸಿ, ಈ ಸೌಲಭ್ಯವನ್ನು ಇಲ್ಲಿನ ನಾಗರಿಕ ಸಂಸ್ಥೆಗೆ ಹಸ್ತಾಂತರಿಸಿದರು. ಈ ಸಂದರ್ಭ ತಮ್ಮ ವರ್ಚುವಲ್‌ ಭಾಷಣದಲ್ಲಿ ಮುಖ್ಯಮಂತ್ರಿ ಅವರು, ಟ್ರ್ಯಾಕಿಂಗ್‌ ಮತ್ತು ಕೋವಿಡ್‌ -19 ಸಂಪರ್ಕ ಪತ್ತೆಹಚ್ಚುವಿಕೆಯನ್ನು ಹೆಚ್ಚಿ ಸಬೇಕಾಗಿದ್ದು, ಇದು ಥಾಣೆ ಮತ್ತು ಮುಂಬಯಿ ಮನಪಾ ಮುಖ್ಯಸ್ಥರ ಜವಾಬ್ದಾರಿಯಾಗಿದೆ ಎಂದರು.

Advertisement

ಈ ಕ್ರಮಗಳು ಧಾರಾವಿ ಮತ್ತು ಮಾಲೆಗಾಂವ್‌ನಂತಹ ಹಾಟ್‌ಸ್ಪಾಟ್‌ಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಸಹಾಯ ಮಾಡಿವೆ. ರಾಜ್ಯದ ಇತರ ಭಾಗಗಳಲ್ಲಿಯೂ ಇದನ್ನು ನಡೆಸಬಹುದಾಗಿದೆ ಎಂದು ಸಿಎಂ ನುಡಿದಿದ್ದಾರೆ. ಕಳೆದ ಎರಡು ತಿಂಗಳಲ್ಲಿ 100 ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸ ಲಾಗಿದೆ ಮತ್ತು ಲಕ್ಷಗಳಷ್ಟು ಹಾಸಿಗೆಗ ‌ಳನ್ನು ಸಿದ್ಧಪಡಿಸಲಾಗಿದೆ ಎಂದು ಠಾಕ್ರೆ ಪ್ರತಿಪಾದಿಸಿದರು. ಥಾಣೆಗಾಗಿ 1,000 ಹಾಸಿಗೆಗಳ ಕೋವಿಡ್‌ ಆಸ್ಪತ್ರೆಯನ್ನು ಉದ್ಘಾಟಿಸುವಾಗ ಮುಖ್ಯಮಂತ್ರಿ ಅವರು, ಈ ಸೌಲಭ್ಯವು ತಾತ್ಕಾಲಿಕವಾಗಿದ್ದರೂ, ಪ್ರತಿ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ ಎಂದರು.

ನೆರೆಯ ಮುಂಬಯಿಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನ ಕೋವಿಡ್‌ -19 ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಐಸಿಯು ಹಾಸಿಗೆಗಳ ಬಗ್ಗೆಯೂ ಅವರು ತಮ್ಮ ಭಾಷಣದಲ್ಲಿ ವಿಶೇಷ ಉಲ್ಲೇಖ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next