Advertisement
ಬಂಟರ ಸಂಘ ವಸಾಯಿ ಡಹಾಣೂ ಪ್ರಾದೇಶಿಕ ಸಮಿತಿಯು ಫೈನಲ್‌ನಲ್ಲಿ ಮುಲುಂಡ್ ಬಂಟ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿತು. ಮುಲುಂಡ್ ಬಂಟ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು. ಭಾಗವಹಿಸಿದ್ದ ಹನ್ನೊಂದು ತಂಡಗಳಲ್ಲಿ ಕೊನೆಯ ಹಂತದವರೆಗೂ ಶಿಸ್ತುಬದ್ಧವಾಗಿ, ಕ್ರೀಡಾಸ್ಪೂರ್ತಿಯನ್ನು ಮೆರೆದ ಬೋಂಬೆ ಬಂಟ್ಸ್ ಅಸೋಸಿಯೇಶನ್ ತಂಡವು ಶಿಸ್ತುಬದ್ಧ ತಂಡ ಪುರಸ್ಕಾರವನ್ನು ಪಡೆಯಿತು.
Related Articles
Advertisement
ಥಾಣೆ ಬಂಟ್ಸ್‌ನ ಉಪಾಧ್ಯಕ್ಷ ವೇಣು ಗೋಪಾಲ್ ಎಲ್. ಶೆಟ್ಟಿ ಅವರು ಪ್ರಥಮಬಹುಮಾನದ 25,000 ರೂ. ನಗದು ಮತ್ತು ಮಾಜಿವಾಡಾದ ಅಪೋಲೋ ಹೊಟೇಲ್ ಇದರ ಸಂತೋಷ್ ಶೆಟ್ಟಿ ಅವರು ರನ್ನರ್ ಅಪ್ ತಂಡದ 15,000 ರೂ. ನಗದು ಬಹುಮಾನವನ್ನು ಪ್ರಾಯೋಜಿಸಿದ್ದರು. ಪಂದ್ಯಾ ವಳಿಯ ತೀರ್ಪುಗಾರರಾಗಿ ನಿಖೀಲ್, ಗಣೇಶ್ ಮತ್ತು ಸ್ಕೋರರ್ ಆಗಿ ಪ್ರಥಮೇಶ್ ಅವರು ಸಹಕರಿಸಿದರು. ಮನೀಷ್ ಶೆಟ್ಟಿ ಇವರು ದಿನಪೂರ್ತಿ ಕನ್ನಡ, ತುಳು, ಹಿಂದಿ, ಇಂಗ್ಲಿಷ್‌ನಲ್ಲಿ ಪಂದ್ಯದ ವೀಕ್ಷಕ ವಿವರಣೆ ನೀಡಿದರು. ವಿವಿಧ ಪ್ರಾಯೋಜಕರನ್ನು ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರು ಗೌರವಿಸಿದರು. ಪಂದ್ಯಾಟ ವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೇಶ್ ಶೆಟ್ಟಿ, ಪುಷ್ಪರಾಜ್ ಎಲ್. ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಯುವ ವಿಭಾಗದ ರಂಜನ್ ಆರ್. ಶೆಟ್ಟಿ, ಸುಶಾಂತ್ ಶೆಟ್ಟಿ ಇವರನ್ನು ಥಾಣೆ ಬಂಟ್ಸ್‌ನ
ಅಧ್ಯಕ್ಷ ಕುಶಲ್ ಸಿ. ಭಂಡಾರಿ ಮತ್ತು ಸಂಸ್ಥೆಯ ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಸಮಾರಂಭದ ವೇದಿಕೆಯಲ್ಲಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರು, ಯುವ ವಿಭಾಗದ ಕಾರ್ಯಾಧ್ಯಕ್ಷರಲ್ಲದೆ ಥಾಣೆ ಬಂಟ್ಸ್‌ನ ಉಪಾಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ, ಕಾರ್ಯದರ್ಶಿ ಸುನೀಲ್ ಜೆ. ಶೆಟ್ಟಿ, ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಪ್ರಾಯೋಜಕರಾದ ಸಂತೋಷ್ ಶೆಟ್ಟಿ, ಡಾಕ್ಟರ್ ಪ್ಲೆನೆಟ್ ಇತರ ಆಡಳಿತ ನಿರ್ದೇಶಕ ರತ್ನಾಕರ ಶೆಟ್ಟಿ, ಥಾಣೆ ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯ ರಘುನಾಥ್ ರೈ, ಉದ್ಯಮಿ ವಿವೇಕ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಮನೀಷ್ ಶೆಟ್ಟಿ ಕಾಂತಾವರ ಇವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಥಾಣೆ ಬಂಟ್ಸ್‌ನ ಸ್ನೇಹ ಸೌರಭ ಪತ್ರಿಕೆಯ ಸಂಪಾದಕ ನಿತ್ಯಾನಂದ ಶೆಟ್ಟಿ ಇವರು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಯೋಗೇಶ್ ಶೆಟ್ಟಿ ವಂದಿಸಿದರು. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.