ಥಾಣೆ: ಥಾಣೆ ಪರಿಸರದ ಸಮಾಜ ಸೇವಕ ರಾದ ಡಿ. ಜಿ. ಬೋಳಾರ್, ಭಾಸ್ಕರ್ ಎಂ. ಶೆಟ್ಟಿ, ದಿ| ಪ್ರೊ| ಸೀತಾರಾಮ ಆರ್. ಶೆಟ್ಟಿ, ದಿ| ಸಂಜೀವ ಶೆಟ್ಟಿ, ಕೇಶವ್ ಎಂ. ಆಳ್ವ, ರವೀಂದ್ರ ಎಂ. ಶೆಟ್ಟಿ, ಎನ್. ಶೇಖರ್ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ನೆಲೆ ಕಂಡು, 14 ವರ್ಷದ ಇತಿಹಾಸವನ್ನು ಹೊಂದಿರುವ ಥಾಣೆ ಬಂಟ್ಸ್ ಪರಿಸರದ ಸಮಸ್ತ ಸಮಾಜ ಬಾಂಧವರ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದಕ್ಕೆ ಪೂರಕವೆಂಬಂತೆ ಥಾಣೆಯಲ್ಲಿ ನೆಲೆಸಿರುವ ಬಂಟ ಸಮುದಾಯದ ಎಲ್ಲರ ಕಷ್ಟಸುಖಗಳಲ್ಲಿ ಸಹಭಾಗಿಯಾಗಿ ಅದರಲ್ಲೂ ಸಮಾಜ ಬಾಂಧವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಅವರಿಗೆ ಶೈಕ್ಷಣಿಕ ನೆರವನ್ನು ನೀಡುತ್ತಾ ಬಂದಿರುವುದು ಈ ಸಂಸ್ಥೆಯ ವಿಶೇಷತೆಯಾಗಿದೆ. ಜತೆಗೆ ಆಧ್ಯಾತ್ಮಿಕ ಚಿಂತನೆ, ಪ್ರತಿಭಾಸ್ಪರ್ಧೆ, ವೈದ್ಯಕೀಯ ನೆರವು, ರಕ್ತದಾನ ಶಿಬಿರ, ಸಾಂಸ್ಕೃತಿಕ ವೈಭವ, ವಿಧ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕಾಗಿ ಯೋಗ್ಯ ಉಪನ್ಯಾಸ ಮಾರ್ಗದರ್ಶನ ಕಾರ್ಯಕ್ರಮವನ್ನು ನೀಡುತ್ತಾ ಬಂದಿದೆ.
ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್ ಆರ್. ಶೆಟ್ಟಿ, ಸ್ಥಾಪಕರು, ಮಾಜಿ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದವರು, ಯುವ ವಿಭಾಗದವರ ಸಂಪೂರ್ಣ, ಪರಿಶ್ರಮದೊಂದಿಗೆ ಮತ್ತು ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ, ಹಾಗೂ ಸುನಿಲ… ಆಳ್ವ ಅವರ ನೇತೃತ್ವದಲ್ಲಿ ಶೈಕ್ಷಣಿಕ ನೆರವನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶೈಕ್ಷಣಿಕ ಸಹಾಯ ಬಯಸುವ ಸಮಾಜದವರು, ಅರ್ಜಿ ಯನ್ನು ಥಾಣೆ ಬಂಟ್ಸ್ ಅಸೋಸಿಯೇಶನ್ ಕಚೇರಿಯಿಂದ ಜೂನ್ 5 ರಿಂದ ಜೂ. 9 ರೊಳಗೆ ಪಡೆಯಬಹುದು. ಮಾಹಿತಿಗಾಗಿ 9167387119 ಈ ನಂಬರನ್ನು ಸಂಪರ್ಕಿಸ ಬಹುದು. ಅಥವಾ ಸಂಜೆ 4 ರಿಂದ ರಾತ್ರಿ 8 ರತನಕ ಸಂಘದ ಕಚೆೇರಿಯಲ್ಲಿ ವಿಚಾರಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.