ಮುಂದಿನ ಕೆಲವೇ ದಿನಗಳಲ್ಲಿ ಜಿ.ಪಂ. ಮತ್ತು ತಾ.ಪಂ. ಆಡಳಿತಾವಧಿ ಮುಗಿದು ಚುನಾವಣೆ ನಡೆಸಲು ಚುನಾವಣ ಆಯೋಗ ಸಿದ್ಧತೆ ನಡೆಸುತ್ತಿರುವಂತೆಯೇ ಈ ಹೇಳಿಕೆ ಹೊರಬಿದ್ದಿರು ವುದು ರಾಜಕೀಯವಾಗಿ ಅಷ್ಟಾಗಿ ಚರ್ಚೆಯ ಮುನ್ನೆಲೆಗೆ ಬಾರದಿದ್ದರೂ ಕಾರ್ಯಕರ್ತರಲ್ಲಿ ಚರ್ಚೆಗೆ ಕಾರಣವಾಗಿದೆ.
Advertisement
ರಾಜಕೀಯ ನೆಲೆ ಪೂರೈಕೆ ತಾಣಜಿ.ಪಂ. ಮತ್ತು ಗ್ರಾ.ಪಂ. ವ್ಯವಸ್ಥೆ ನಡುವೆ ತಾ.ಪಂ. ಕಾರ್ಯನಿರ್ವಹಿಸುತ್ತಿತ್ತು. ಇದು ಒಂದು ರೀತಿಯಲ್ಲಿ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸಿ ಕೊಳ್ಳಲು ಕಾರ್ಯಕರ್ತರಿಗೆ ಇರುವ ವ್ಯವಸ್ಥೆಯೂ ಆಗಿದೆ. ಜಿ.ಪಂ. ಕ್ಷೇತ್ರಗಳು ನಾಲ್ಕೈದು ಗ್ರಾ.ಪಂ.ಗಳಿಗೆ ಒಂದಾಗಿದೆ. ಜಿ.ಪಂ. ಕ್ಷೇತ್ರಗಳು ಉಡುಪಿ ಜಿಲ್ಲೆಯಲ್ಲಿರುವುದು ಕೇವಲ 26. ಇದು ಶಾಸಕ ಹುದ್ದೆಗೆ ಆಕಾಂಕ್ಷಿಯಾಗಿ ಅಲ್ಲಿ ನೆಲೆ ಸಿಗದ ಕಾರ್ಯಕರ್ತ/ನಾಯಕರಿಗೆ ಜಾಗ ತೋರುವ ಹುದ್ದೆಯಾಗಿದೆ. ಗ್ರಾ.ಪಂ. ವ್ಯವಸ್ಥೆ ಸ್ಥಳೀಯ ಕಾರ್ಯಕರ್ತರಿಗೆ ಜಾಗ ತೋರುವ ಹುದ್ದೆ. ಈ ನಡುವೆ ಜಿ.ಪಂ.ನಲ್ಲಿ ಅವಕಾಶ ಸಿಗದ, ಸ್ಥಳೀಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚು ಸಾಮಾಜಿಕ ಸ್ಥಾನಮಾನವಿರುವ ಕಾರ್ಯಕರ್ತರಿಗೆ ತಾ.ಪಂ. ನೆಲೆ ಕೊಡುತ್ತಿತ್ತು.
ಒಂದು ವೇಳೆ ತಾ.ಪಂ. ವ್ಯವಸ್ಥೆ ರದ್ದುಗೊಂಡಲ್ಲಿ ಪ್ರತಿ ಜಿಲ್ಲೆಗಳಲ್ಲಿ ಸಣ್ಣ ಮಟ್ಟದ ರಾಜಕೀಯ ನೆಲೆ ಕಂಡುಕೊಂಡಿದ್ದ ನೂರಾರು ಕಾರ್ಯಕರ್ತರಿಗೆ ರಾಜಕೀಯ ನೆಲೆ ಇಲ್ಲದೆ ಪರಿತಪಿಸುವಂತಾಗುವುದು ಮಾತ್ರ ಖಾತ್ರಿ. ಹೆಸರಿಗಷ್ಟೇ ಅಲಂಕರಿಸುವ ಈ ಹುದ್ದೆಗಿಂತ ರದ್ದತಿ ಲೇಸು ಎಂಬವರೂ ಸಾಕಷ್ಟು ಜನರಿದ್ದಾರೆ.
Related Articles
Advertisement