ತಾಳಿಕೋಟೆ: ನಗರೇಶ್ವರ ದೇವಸ್ಥಾನದಲ್ಲಿ ಪ್ರಾರಂಭಗೊಂಡ ಗುರು ರಾಘವೇಂದ್ರ ಮಹಾಸ್ವಾಮಿಗಳ 45ನೇ ವರ್ಷದ ಆರಾಧನಾ ಮಹೋತ್ಸವ ಮೂರನೇ ದಿನ ರವಿವಾರ ಉತ್ತರಾರಾಧನೆ ಮಹಾಪೂಜಾ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಜರುಗಿತು.
ಪ್ರಾತಃ ಕಾಲ ಸುಪ್ರಭಾತ, ನಗರೇಶ್ವರ ಮೂರ್ತಿಗೆ ರುದ್ರಾಭಿಷೇಕ ಗುರುರಾಯರ ಮೂರ್ತಿಗೆ ಪಂಚಾಮೃತ ಅಭಿಷೇಕ, ಗುರು ರಾಯರ ಅಷ್ಟೋತ್ತರ, ರಥದ ಪೂಜೆ, ಕನಿಕಾಭಿಷೇಕ, ತುಳಸಿ ಅರ್ಚನೆ, ಅಸ್ತೋದಕ, ಮಹಾ ಮಂಗಳಾರತಿ ತೀರ್ಥ ಪ್ರಸಾದ ಜರುಗಿತು.
ಸಾಯಂಕಾಲ 5 ಗಂಟೆಗೆ ಗುರು ಸಾರ್ವಭೌಮರ ರಥದೊಂದಿಗೆ ರಾಘವೇಂದ್ರ ಮಹಾಸ್ವಾಮಿಗಳ ಭಾವಚಿತ್ರ ಮೆರವಣಿಗೆ ನಗರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ವಿಠuಲ ಮಂದಿರಕ್ಕೆ ತೆರಳಿ ಅದೇ ಮಾರ್ಗವಾಗಿ ನಗರೇಶ್ವರ ದೇವಸ್ಥಾನ ತಲುಪಿತು.
ನಂತರ ನಗರೇಶ್ವರ ಮಂದಿರದಲ್ಲಿ ಸಂಗೀತ ಶಿಕ್ಷಕರಾದ ಮಲ್ಲಿಕಾರ್ಜುನ ಭಜಂತ್ರಿ, ಬಸವರಾಜ ಪೂಜಾರಿ, ವಿಜಯಾ ಅಚಲಕರ, ಲಕ್ಷ್ಮಣಸಿಂಗ್ ಹಜೇರಿ, ಜ್ಯೋತಿ ಗಂಪಾ, ಶೋಭಾ ಅಗಡಿ, ಗುಂಡಣ್ಣ ಹಂದಿಗನೂರ, ದೀಪಕಸಿಂಗ್ ಹಜೇರಿ, ಪ್ರಕಾಶ ಕಟ್ಟಿಮನಿ, ಗೀತಾ ಕೋಲಕಾರ, ತಬಲಾ ವಾದಕರಾದ ಯಮನೇಶ ಯಾಳಗಿ, ವಿಶ್ವನಾಥ ಸರೋದೆ, ಸಂಜೀವಕುಮಾರ ಗಡ್ಡಾಳೆ, ಮಹಾದೇವಪ್ಪ ಹೂಗಾರ, ಖಾಸ್ಗತೇಶ್ವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಯರ ಕುರಿತು ಸುಪ್ರಭಾತ ಪ್ರಸ್ತುತ ಪಡಿಸಿದರು.
ಉತ್ತರಾರಾಧನೆ ಪೂಜಾ ಕಾರ್ಯಕ್ರಮವನ್ನು ಶ್ರೀಧರಭಟ್ ಜೋಶಿ, ವಸಂತ ಜೋಶಿ, ಶ್ರೀನಿವಾಸ ಜೋಶಿ, ಅನಿಲ ಜೋಶಿ, ವೆಂಕಟೇಶ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ರಾಘವೇಂದ್ರ ಉಡುಪಿ, ಅಭಿಷೇಕ ಜೋಶಿ, ಅಕ್ಷಯ ಜೋಶಿ, ಸಂಜೀವ ಗ್ರಾಮಪುರೋಹಿತ, ಪ್ರಭಾಕರ ಜೋಶಿ, ಮುರಳಿಧರ ಜೋಶಿ, ಲಿಂಗೋಜಿರಾವ್ ಕುಲಕರ್ಣಿ ನೆರವೇರಿಸಿದರು.
ನೇತೃತ್ವ ವಹಿಸಿದ್ದ ಡಾ| ಎನ್.ಎಲ್. ಶೆಟ್ಟಿ ಮಾತನಾಡಿ, ತಾಳಿಕೋಟೆ ಭಾಗದ ಭಕ್ತ ಸಮೂಹ ಅಪೇಕ್ಷೆಯಂತೆ ಕಳೆದ 45 ವರ್ಷಗಳ ಹಿಂದೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಕಲಬುರಗಿ ವ್ಯಾಪಾರಿಗಳಾದ ದಯಾನಂದ ಗಂಪಾ, ಸೂರ್ಯಕಾಂತ ರಗೋಜಿ, ಬೀದರ ಆರ್ಯವೈಶ್ಯ ಸಮಾಜ ಅಧ್ಯಕ್ಷ ಬಿ.ಆರ್.ಚಿದರಿ, ಯಂಕಣ್ಣ ಕನಕಗಿರಿ, ಗೋವಿಂದ ಶೆಟ್ಟಿ, ರವಿ ತಾಳಪಲ್ಲೆ, ಯಂಕಣ್ಣ ತಾಳಪಲ್ಲೆ, ಪ್ರಶಾಂತ ಜನಾದ್ರಿ, ವೇಂಕಟೇಶ ತಾಳಪಲ್ಲೆ, ಸುವೇಂದ್ರ ಕನಕಗಿರಿ, ವಾಸುದೇವ ಹೆಬಸೂರ, ದತ್ತಾತ್ರೇಯ ಹೆಬಸೂರ, ಅಶೋಕ ಶೆಟ್ಟಿ, ನಾಗು ಮಾನ್ವಿ, ಕೃಷ್ಣಾ ತಾಳಪಲ್ಲೆ, ಸತ್ಯನಾರಾಯಣ ತಾಳಪಲ್ಲೆ, ಮಲ್ಲಯ್ಯ, ಪ್ರಲ್ಹಾದ ಮಾನ್ವಿ, ಮಂಜು ಶೆಟ್ಟಿ, ಭೀಮಣ್ಣ ಇದ್ದರು.