Advertisement

ಪರಿಸರಸ್ನೇಹಿ ಪ್ರತಿಪಾದಕ ಗ್ರಂಥ ಬಿಡುಗಡೆ

12:49 AM Sep 10, 2019 | Sriram |

ಉಡುಪಿ: ಭೂತಾನಿನ ಮಾಜಿ ಶಿಕ್ಷಣ ಸಚಿವ ಠಾಕೂರ್‌ ಸಿಂಗ್‌ ಪೌಡ್ಯೆಲ್ ಬರೆದ “ಮೈ ಗ್ರೀನ್‌ ಸ್ಕೂಲ್‌’ ಪುಸ್ತಕದ ಕನ್ನಡ ಅವತರಣಿಕೆ “ನನ್ನ ಪರ್ಣಿ ಶಾಲೆ’ಯನ್ನು ಮಣಿಪಾಲದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಿಎಲ್‌ಐಎಲ್‌ ಅಟ್‌ ಇಂಡಿಯಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

Advertisement

ಪುಸ್ತಕವನ್ನು ಬಿಡುಗಡೆಗೊಳಿಸಿದ ಮಾಹೆ ವಿ.ವಿ. ಕುಲಪತಿ ಡಾ|ಎಚ್‌. ವಿನೋದ ಭಟ್‌ ಅವರು, ಭಾರತೀಯ ಶಿಕ್ಷಣ ಪದ್ಧತಿಗೆ ಮರೆಯಲಾಗದ ಕೊಡುಗೆ ಸಲ್ಲಿಸಿರುವ ಡಾ| ರಾಧಾಕೃಷ್ಣನ್‌ ಅವರ ಸ್ಮರಣೀಯ ದಿನದಂದು ಬಹುಭಾಷೀಯ ಸಮ್ಮೇಳನವನ್ನು ಆಯೋಜಿಸಿದ್ದು ಶ್ಲಾಘನೀಯ. ಭಾರತೀಯ ಆಯಾಮದಲ್ಲಿ ಹೊಸ ಬೋಧನಕ್ರಮದ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿರುವ ಯೂರೋಪ್‌ ಮತ್ತು ಭಾರತೀಯ ಪಾಲುದಾರ ಸಂಸ್ಥೆಗಳು ಉತ್ತಮ ಕೆಲಸ ನಿರ್ವಹಿಸುತ್ತಿವೆ ಎಂದರು.

ಪ್ರಕೃತಿಯ ಘನಿಷ್ಠ ಸಂಬಂಧದೊಂದಿಗೆ ಒಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆ ಸಾಧ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸಿದ್ದೇನೆ. ವ್ಯಕ್ತಿಯು ಪ್ರಕೃತಿಯೊಂದಿಗೆ ಬಾಳುವೆ ನಡೆಸುವ ಬದುಕಿನ ಸಂಸ್ಕೃತಿ ಶಾಲಾ ಮಟ್ಟದಲ್ಲಿ ಜಾರಿಗೊಂಡರೆ ಬಲಿಷ್ಠ ಪರಿಸರಸ್ನೇಹಿ ಮತ್ತು ಮಾನವಿಕ ಸೂಕ್ಷ್ಮತೆಗಳನ್ನು ಒಳಗೊಂಡ ವ್ಯಕ್ತಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತನ್ನ ಪುಸ್ತಕದ ಬಗ್ಗೆ ಪೌಡ್ಯೆಲ್ ಹೇಳಿದರು.ಮಣಿಪಾಲ್‌ ಯುನಿವರ್ಸಲ್‌ ಪ್ರಸ್‌ ಮುಖ್ಯ ಸಂಪಾದಕಿ ಪ್ರೊ|ನೀತಾ ಇನಾಂದಾರ್‌ ಸ್ವಾಗತಿಸಿ ಪೌಡ್ಯೆಲ್ ಅವರನ್ನು ಭೇಟಿಯಾದಾಗ ಪುಸ್ತಕವನ್ನು ಅನುವಾದಿಸಲು ಪ್ರೇರಣೆ ದೊರಕಿತು ಎಂದರು. ಅನುವಾದ ಕಾರ್ಯದಲ್ಲಿ ಡಾ| ಎನ್‌. ಟಿ. ಭಟ್‌ ಅವರ ಸಹಕಾರವನ್ನು ಸ್ಮರಿಸಿಕೊಂಡರು. ಡಾ| ಎನ್‌.ಟಿ. ಭಟ್‌ ಶುಭಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next