ಬ್ಯಾಂಕಾಕ್: ಭಾರತದ ಖ್ಯಾತ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು ಅವರು ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಕಠಿನ ಗೆಲುವು ಸಾಧಿಸಿ ದ್ವಿತೀಯ ಸುತ್ತಿಗೇರಿದ್ದಾರೆ.
ಇದೇ ವೇಳೆ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಎಚ್‌ಎಸ್ ಪ್ರಣಯ್ ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದಾರೆ.
ಥಾಮಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಟನೇ ಶ್ರೇಯಾಂಕದ ಶ್ರೀಕಾಂತ್ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಜ್ ಅವರನ್ನು 18-21, 21-10, 21-16 ಗೇಮ್‌ಗಳಿಂದ ಉರುಳಿಸಿದರು.
ಆರನೇ ಶ್ರೇಯಾಂಕದ ಸಿಂಧು ಮೂರು ಗೇಮ್ ಗಳ ಪ್ರಬಲ ಸೆಣಸಾಟದಲ್ಲಿ ಅಮೆರಿಕದ ಲಾರೆನ್ ಲ್ಯಾಮ್ ಅವರನ್ನು 21-19, 19-21, 21-18 ಗೇಮ್‌ಗಳಿಂದ ಮಣಿಸಿದರು.