ಬ್ಯಾಂಕಾಕ್ : ಥಾಯ್ಲೆಂಡ್ನ ಪ್ರಿ-ಸ್ಕೂಲ್ ಡೇಕೇರ್ ಸೆಂಟರ್ನಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಬಂದೂಕು ಮತ್ತು ಚಾಕುವಿನಿಂದ ನಡೆಸಿದ ದಾಳಿಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಂಗ್ ಬುವಾ ಲ್ಯಾಂಫು ಪ್ರಾಂತ್ಯದಲ್ಲಿ ನಡೆದ ಮಾರಣ ಹೋಮದ ನಂತರ ದುಷ್ಕರ್ಮಿ ತನ್ನ ಕುಟುಂಬವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಜೀತ ಮನಸ್ಥಿತಿಯಲ್ಲಿ ಖರ್ಗೆ ಅಧ್ಯಕ್ಷೀಯ ಚುನಾವಣೆಯಲ್ಲಿದ್ದಾರೆ: ಸಿ.ಟಿ.ರವಿ
ಮೃತರು ಮತ್ತು ಗಾಯಗೊಂಡವರಲ್ಲಿ ಪುಟ್ಟ ಮಕ್ಕಳೂ ಸೇರಿದ್ದಾರೆ. ದಾಳಿಕೋರ ಓಡಿಹೋಗುವ ಮೊದಲು ಸಿಕ್ಕ ಸಿಕ್ಕವರಿಗೆಲ್ಲ ಗುಂಡು ಹಾರಿಸಿ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದುಷ್ಕ್ರತ್ಯದ ಉದ್ದೇಶವು ಅಸ್ಪಷ್ಟವಾಗಿದೆ. ಇತ್ತೀಚೆಗೆ ಅಧಿಕಾರಿಯನ್ನು ವಜಾಗೊಳಿಸಲಾಗಿತ್ತು ಎಂದು ವರದಿಗಳು ಹೇಳಿವೆ.
ಬ್ಯಾಂಕಾಕ್ ನೋಂದಣಿ ಫಲಕಗಳನ್ನು ಹೊಂದಿರುವ ಬಿಳಿ ಟ್ರಕ್ ಅನ್ನು ಅವರು ಕೊನೆಯ ಬಾರಿಗೆ ಓಡಿಸುತ್ತಿದ್ದ ಮತ್ತು ಆತನ ಹೆಸರು ಪನ್ಯಾ ಕಾಮ್ರಾಬ್ ಎಂದು ಪೊಲೀಸರು ತಿಳಿಸಿದ್ದಾರೆ.