Advertisement

“ಕನಕದಾಸರಿಂದ ಸಮಾಜದ ಓರೆಕೋರೆ ತಿದ್ದುವ ಪ್ರಯತ್ನ’

12:52 AM Apr 14, 2019 | Team Udayavani |

ಉಡುಪಿ: ಕನಕದಾಸರು ದಾಸ ಸಾಹಿತ್ಯದ ಮೂಲಕ 15ನೇ ಶತಮಾನದಲ್ಲಿ ಸಮಾಜದ ಓರೆಕೋರೆ ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ್‌ ಹೇಳಿದರು.

Advertisement

ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌, ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಸಹಯೋಗದಲ್ಲಿ ಶನಿವಾರ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸ ಕೀರ್ತನ ಹಾಗೂ ಸಂಗೀತ ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರೊಬ್ಬನೇ ನಾವೆಲ್ಲ ಆತನ ದಾಸರು. ನಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುವ ತತ್ತÌ ಜಗತ್ತಿಗೆ ನೀಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ. ಇಲ್ಲಿಯವರೆಗೆ ಕನಕ ದಾಸರು ರಚಿಸಿದ 230 ಕೀರ್ತನೆಗಳು ಲಭ್ಯವಾಗಿದೆಎಂದು ಹೇಳಿದರು.

ವಿಜ್ಞಾನ ಹೊರಗಿನ ಪ್ರಪಂಚ ತಿಳಿದು ಕೊಳ್ಳಲು ಪ್ರೇರಣೆ ನೀಡಿದರೆ, ಸಂಗೀತ ಮನುಷ್ಯನ ಒಳಗಿನ ಭಾವಲೋಕ ತೆರೆಯುವಲ್ಲಿ ಸ್ಪಂದಿಸುತ್ತದೆ. ಎಂದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ಆಡಳಿತಾಧಿಕಾರಿ ಡಾ| ಎಚ್‌.ಶಾಂತಾರಾಮ್‌ ಮಾತನಾಡಿ, ಕನಕದಾಸರು ತಮ್ಮ ವಿಚಾರಧಾರೆಯ ಮೂಲಕ ಉಡುಪಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಸಂಪನ್ಮೂಲ ವ್ಯಕ್ತಿ ಡಾ| ಮುಲ್ಲೆ„ ವಾಸಲ್‌ ಚಂದ್ರಮೌಳಿ ಚೆನ್ನೈ ಮಾತನಾಡಿ, ಸಂಗೀತವು ಗಮಕ, ಭಾವ ಮತ್ತು ವಿಚಾರಗಳನ್ನೊಳಗೊಂಡ ಪ್ರಕ್ರಿಯೆ. ಒಂದನ್ನು ಬಿಟ್ಟು ಇನ್ನೊಂದು ಇರಲಾರದಷ್ಟು ಅನ್ಯೋನ್ಯ ಬಂಧ ಹುಟ್ಟುಹಾಕಿವೆ ಎಂದರು.

Advertisement

ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯ ನಿರ್ದೇಶಕಿ ಉಮಾ ಉದಯಶಂಕರ್‌ ಪ್ರಾಸ್ತಾವನೆಗೈದರು. ಮಾಹೆ ಕನಕ ಅ.ಸಂ.ಪೀಠ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿ, ಮಾಹೆ ಕನಕ ಅ.ಸಂ.ಪೀಠ ಆಡಳಿತಾಧಿಕಾರಿ ಪ್ರೊ| ಎಂ.ಎಲ್‌. ಸಾಮಗ ವಂದಿಸಿದರು. ಸುಶ್ಮಿತಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next