ಮುಂಬಯಿ: ಶಿವಸೇನೆಯಿಂದ ಬಂಡಾ ಯ ವೆದ್ದು ತನ್ನ ಬೆಂಬಲಿತ ಶಾಸಕ ರೊಂದಿಗೆ ಪಕ್ಷದಿಂದ ಹೊರನಡೆದಿದ್ದ ಏಕ ನಾಥ ಶಿಂಧೆಯವರಿಗೆ ಸರಕಾರ ರಚಿಸು ವಂತೆ ಆಹ್ವಾನ ನೀಡಿದ್ದ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಯವರ ನಡೆಯನ್ನು ಪ್ರಶ್ನಿಸಿ, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸುಪ್ರೀಂ ಕೋರ್ಟ್‌ನ ರಜಾಕಾಲದ ನ್ಯಾಯ ಪೀಠವು ಉದ್ಧವ್ ಅವರ ಅರ್ಜಿಯನ್ನು ಸ್ವೀಕರಿಸಿದ್ದು ಅರ್ಜಿಯ ವಿಚಾರಣೆಯನ್ನು ಜು. 11ಕ್ಕೆ ನಿಗದಿಗೊಳಿಸಿದೆ. ಅರ್ಜಿಯಲ್ಲಿ ಠಾಕ್ರೆಯವರು, ಜು. 3 ಮತ್ತು 4ರಂದು ಶಿಂಧೆ ಬಣದ ಶಾಸಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನೂತನ ಸ್ಪೀಕರ್ ಚುನಾವಣೆಗಾಗಿ ಮತ ಚಲಾ ಯಿಸಿದ್ದು ಹಾಗೂ ಬಂಡಾಯ ಶಾಸಕರಾಗಿಯೇ ಇದ್ದು ಸದನದಲ್ಲಿ ತಮ್ಮ ಸರಕಾರಕ್ಕೆ ಬಹುಮತ ಸಾಬೀತುಪಡಿಸಿದ್ದು ವಿಧಾನಸಭಾ ನಡಾವಳಿ ಗಳಿಗೆ ವಿರುದ್ಧವಾದದ್ದು ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
ಮತ್ತೊಂದೆಡೆ, ಮಹಾರಾಷ್ಟ್ರದ ನೂತನ ಮುಖ್ಯ ಮಂತ್ರಿ ಏಕನಾಥ ಶಿಂಧೆ ಅವರು ಸಾಮಾ ಜಿಕ ಜಾಲತಾಣ ಗಳಲ್ಲಿ ನಾಲ್ಕು ಫೋಟೋ ಗಳನ್ನು ಹಂಚಿಕೊಂಡಿದ್ದು, ತಮ್ಮ ಬಲ ಹೆಚ್ಚಾಗಿದ್ದನ್ನು ತೋರಿಸಿಕೊಂ ಡಿದ್ದಾರೆ. ಥಾಣೆ, ಕಲ್ಯಾಣ್-ದೊಂಬಿವಾಲಿ, ಮತ್ತು ಮುಂಬಯಿ ನಗರ ಪಾಲಿಕೆಗಳ ಮಾಜಿ ಸದಸ್ಯ ರೊಂದಿಗಿನ ಫೋಟೋ ಅದಾಗಿವೆ.
ನಮ್ಮ ಪಕ್ಷದ ಚಿಹ್ನೆ, ಹೆಸರನ್ನು ಯಾರೂ ಕಸಿಯಲಾಗದು. ಹೊಸ ಸರಕಾರಕ್ಕೆ ನಾನು ಸವಾಲು ಹಾಕುತ್ತೇನೆ. ತಾಕತ್ತು ಇದ್ದರೆ ಚುನಾವಣೆಗೆ ಬರಲಿ.
-ಉದ್ಧವ್ ಠಾಕ್ರೆ,
ಶಿವಸೇನೆ ಮುಖ್ಯಸ್ಥ