Advertisement
ಸುಧೀರ್ ಅತ್ತಾವರ್ ಅವರು ಪರ್ಶಿಯನ್ ಕಥೆಯಿಂದ ಸ್ಪೂರ್ತಿ ಪಡೆದು ಬರೆದಿರುವ “ಬಕಾಲಿಯ ಹೂ’ ಸಂಗೀತಮಯ ನಾಟಕ ಕೃತಿಯನ್ನು ಅವರು ನಗರದ ವುಡ್‌ಲ್ಯಾಂಡ್ಸ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿದರು. ಸೈನಿಕರು ತಪ್ಪು ಮಾಡುವುದಿಲ್ಲ ಎಂದು ಹೇಳಲಾಗದು. ಅದು ಪ್ರಕೃತಿ ಸಹಜವಾದ ತಪ್ಪುಗಳಾಗಿರ ಬಹುದು. ಅದನ್ನೇ ಬರಗೂರು ಅವರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಆದರೆ ಅಂತಹ ಲೇಖನವನ್ನು ಬರೆಯಲೇ ಬಾರದು ಹಾಗೂ ವಿಶ್ವವಿದ್ಯಾನಿಲಯದಲ್ಲಿ ಪಠ್ಯವಾಗಿರುವ ಕೃತಿಯೊಂದನ್ನು ಹಿಂಪಡೆಯ ಬೇಕು ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರÂದ ಹರಣ ಎಂದು ಸಾರಾ ಅಬೂಬಕರ್ ಹೇಳಿದರು.
“ಮಂಗಳೂರಿನ ಇವತ್ತಿನ ಪರಿಸ್ಥಿತಿ ತನಗೆ ತೀವ್ರ ನೋವು ತರುತ್ತಿದೆ. ನಾನು 60 ವರ್ಷಗಳಿಂದ ಮಂಗಳೂರಿನಲ್ಲಿದ್ದೇನೆ. ಹಿಂದೆಲ್ಲಾ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದ ಇಲ್ಲಿ, ಯುವಜನತೆಯ ಈಗಿನ ಸ್ಥಿತಿ ನೋಡಿದಾಗ ಆತಂಕವಾಗುತ್ತಿದೆ. ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳ ಮುಖೇನ ವಿಷಮಯ ವಿಷಯಗಳನ್ನು ಬಿತ್ತುವ ಮೂಲಕ ಸಂಘರ್ಷಗಳಿಗೆ ಯುವಜನತೆ ಎಡೆ ಮಾಡಿಕೊಡುತ್ತಿದ್ದಾರೆ.