Advertisement

ಪಠ್ಯ ವಿವಾದ: ಶಿಕ್ಷಣ ಸಚಿವರ ತುರ್ತು ಸ್ಪಂದನೆ

11:35 PM Aug 26, 2020 | mahesh |

ಉಡುಪಿ: ಆರನೆಯ ತರಗತಿ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿದ್ದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದ್ದ ಪಾಠವನ್ನು ಮುಂದಿನ ವರ್ಷ ಕೈಬಿಡುವುದಾಗಿ ಮತ್ತು ಈ ವರ್ಷ ಆ ನಿರ್ದಿಷ್ಟ ಪಾಠವನ್ನು ಮಾಡದಂತೆ ಸೂಚನೆ ನೀಡುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಪಾಠದ ವಿಷಯವನ್ನು ಅರಿತ ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಶ್ರೀಕೃಷ್ಣಮಠ ಪರ್ಯಾಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಧ್ವನಿ ಸಂದೇಶ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಆಲಿಸಿದ ಸಚಿವ ಸುರೇಶ್‌ ಕುಮಾರ್‌ ಅವರು ಸದ್ಯ ಆ ಪಾಠವನ್ನು ಮಾಡದಂತೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ. “ನಿರ್ದಿಷ್ಟ ಪಾಠ ಈ ವರ್ಷ ಪ್ರಕಟವಾದದ್ದಲ್ಲ. ಈ ವರ್ಷ ಸಮಯದ ಕಾರಣದಿಂದ ಪಠ್ಯವನ್ನು ಪರಿಷ್ಕರಿಸಿಲ್ಲ. ಮುಂದಿನ ವರ್ಷ ಪರಿಷ್ಕರಿಸುವಾಗ ಆ ಅಂಶವನ್ನು ಕೈಬಿಡುತ್ತೇವೆೆ’ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next