Advertisement

ಟಿಇಟಿ ಪ್ರಶ್ನೆಪತ್ರಿಕೆ ಬಂಡಲ್‌ ಪತ್ತೆ!

10:59 PM Sep 28, 2019 | Team Udayavani |

ದಾವಣಗೆರೆ: ಕಳೆದ ಮೇನಲ್ಲಿ ನಡೆದಿದ್ದ ಟಿಇಟಿ (ಟೀಚರ್ ಎಂಟರೆನ್ಸ್‌ ಟೆಸ್ಟ್‌) ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಂಡಲ್‌ಗ‌ಳು ನಗರದ ಮನೆಯೊಂದರಲ್ಲಿ ಪತ್ತೆಯಾಗಿವೆ. ಮೇ 26ರಂದು ಟಿಇಟಿಗೆ ನಡೆದಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಹಲವು ಬಂಡಲ್‌ಗ‌ಳು ಕೆಟಿಜೆ ನಗರ 17ನೇ ಕ್ರಾಸ್‌ನ ಮನೆಯೊಂದರಲ್ಲಿ ಕಳೆದ ರಾತ್ರಿ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಇಲಾಖೆಯವರೇ ಸುಟ್ಟು ಹಾಕಬೇಕು. ಅವುಗಳನ್ನು ಯಾವುದೇ ಕಾರಣಕ್ಕೂ ಹೊರಗಡೆ ವಿಲೇವಾರಿ ಮಾಡುವಂತಿಲ್ಲ. ಆದರೆ, ಮನೆಯೊಂದರಲ್ಲಿ ಬಂಡಲ್‌ಗ‌ಟ್ಟಲೇ ಪ್ರಶ್ನೆಪತ್ರಿಕೆ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆಟಿಜೆ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next