ಕೊಲಂಬೊ: ಮುಂಬರುವ ನ್ಯೂಜಿಲ್ಯಾಂಡ್ ಎದುರಿನ ಟೆಸ್ಟ್ ಸರಣಿಗೆ 17 ಸದಸ್ಯರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟ್ಸ್‌ಮನ್ ಲಹಿರು ತಿರಿಮನ್ನೆ, ವೇಗಿಗಳಾದ ನುವಾನ್ ಪ್ರದೀಪ್, ಲಹಿರು ಕುಮಾರ ಅವರನ್ನು ಮರಳಿ ಕರೆಸಿಕೊಳ್ಳಲಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸದೀರ ಸಮರವಿಕ್ರಮ ಕೂಡ ಮರಳಿದ್ದಾರೆ.
32ರ ಹರೆಯದ ನುವಾನ್ ಪ್ರದೀಪ್ ಸೇರ್ಪಡೆಯಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬಂದಿದೆ. ಅವರು ಗಾಯಾಳಾಗಿ ವಿಶ್ರಾಂತಿಯಲ್ಲಿದ್ದರು. 21ರ ಹರೆಯದ ಲಹಿರು ಕುಮಾರ ಕಳೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.
ಇಂಗ್ಲೆಂಡ್ ಎದುರಿನ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ದಿನೇಶ್ ಚಂಡಿಮಾಲ್ ಮರಳಿ ಶ್ರೀಲಂಕಾ ತಂಡದ ನೇತೃತ್ವ ವಹಿಸಲಿದ್ದಾರೆ. ಬೌಲಿಂಗ್ ಆ್ಯಕ್ಷನ್ ವಿವಾದಕ್ಕೆ ಸಿಲುಕಿರುವ ಅಖೀಲ ಧನಂಜಯ ಅವರನ್ನು ಕೈಬಿಡಲಾಗಿದೆ.
ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ 2 ಟೆಸ್ಟ್, 3 ಏಕದಿನ ಹಾಗೂ ಏಕೈಕ ಟಿ20 ಪಂದ್ಯವನ್ನು ಆಡಲಾಗುವುದು. ಮೊದಲ ಟೆಸ್ಟ್ ಡಿ. 15ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ.
ಶ್ರೀಲಂಕಾ ತಂಡ: ದಿನೇಶ್ ಚಂಡಿಮಾಲ್ (ನಾಯಕ), ದಿಮುತ್ ಕರುಣರತ್ನೆ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವ, ಏಂಜೆಲೊ ಮ್ಯಾಥ್ಯೂಸ್, ರೋಷನ್ ಸಿಲ್ವ, ನಿರೋಷನ್ ಡಿಕ್ವೆಲ್ಲ, ದನುಷ್ಕ ಗುಣತಿಲಕ, ಲಹಿರು ತಿರಿಮನ್ನೆ, ಸದೀರ ಸಮರವಿಕ್ರಮ, ದಿಲುÅವಾನ್ ಪೆರೆರ, ಲಕ್ಷಣ ಸಂದಕನ್, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ಕಸುನ್ ರಜಿತ, ಲಹಿರು ಕುಮಾರ, ದುಷ್ಮಂತ ಚಮೀರ.