ಅಹಮದಾಬಾದ್: ನಿರೀಕ್ಷೆಯಂತೆಯೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಆಸ್ಟ್ರೇಲಿಯನ್ ಬ್ಯಾಟರ್ ಗಳು ದಿನವಿಡೀ ಬ್ಯಾಟಿಂಗ್ ಮಾಡಿದ ಕಾರಣ ಯಾವುದೇ ಫಲಿತಾಂಶ ಬಾರದೆ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
ಇದರೊಂದಿಗೆ ಭಾರತ ತಂಡವು 2-1 ರ ಅಂತರದಿಂದ ಬಾರ್ಡರ್- ಗಾವಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಭಾರತ ತಂಡವು ಅರ್ಹತೆ ಪಡೆದಿದೆ.
ಇದನ್ನೂ ಓದಿ:ಐಪಿಎಸ್ ಅಧಿಕಾರಿಯನ್ನು ವಿವಾಹವಾಗಲಿದ್ದಾರೆ ಪಂಜಾಬ್ ಸಚಿವ ಹರ್ಜೋತ್ ಸಿಂಗ್
91 ರನ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸೀಸ್ ನಾಲ್ಕನೇ ದಿನದಾಟ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಮೂರು ರನ್ ಮಾಡಿತ್ತು. ಇಂದು ಬ್ಯಾಟಿಂಗ್ ಆರಂಭಿಸಿದ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ನೆರವಾದರು. ಹೆಡ್ 90 ರನ್ ಗಳಿಸಿದರೆ, ಮಾರ್ನಸ್ 213 ಎಸೆತ ಎದುರಿಸಿ ಅಜೇಯ 63 ರನ್ ಮಾಡಿದರು.
ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮಾರ್ಚ್ 17ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 480 ಮತ್ತು 175/2
ಭಾರತ: 571