Advertisement
ಪಾಕಿಸ್ಥಾನ ತಂಡವು ಬುಧವಾರದಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
Related Articles
ಪಾಕಿಸ್ಥಾನ ನೆಲದಲ್ಲಿ ಮರಳಿ ಟೆಸ್ಟ್ ಸರಣಿ ನಡೆಯುವುದು ನಮ್ಮ ಪಾಲಿಗೆ ಭಾವನಾತ್ಮಕ ಕ್ಷಣವಾಗಿದೆ. ಎಲ್ಲ ಆಟಗಾರರು ಈ ಸರಣಿ ಬಗ್ಗೆ ಉತ್ಸುಕರಾಗಿದ್ದಾರೆ. ನಮ್ಮ ತಾಯ್ನಾಡ ಮೈದಾನದಲ್ಲಿ ಟೆಸ್ಟ್ ನಡೆಯುವುದು ಖುಷಿಯ ಕ್ಷಣವಾಗಿದೆ. ಇನ್ನು ಮುಂದೆ ಪಾಕ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ನಿರಂತರವಾಗಿ ನಡೆಯಲಿ ಎಂದು ಪಾಕಿಸ್ಥಾನ ತಂಡದ ನಾಯಕ ಅಜರ್ ಅಲಿ ಹಾರೈಸಿದ್ದಾರೆ.
Advertisement
ಈ ಸರಣಿ ನಮ್ಮ ಪಾಲಿಗೆ ಅತೀ ಮುಖ್ಯವಾಗಿದೆ. ಯಾಕೆಂದರೆ ಕಳೆದ ಎರಡು ಸರಣಿಗಳಲ್ಲಿ ನಾವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ವಿರುದ್ಧ ಸೋತಿದ್ದೆವು. ಆಸ್ಟ್ರೇಲಿಯ ವಿರುದ್ಧ ನಾವು ಒಪ್ಪಲಿಕ್ಕೆ ಸಾಧ್ಯವಿಲ್ಲದ ರೀತಿ ಯಲ್ಲಿ ಸೋತಿದ್ದೆವು. ಹಾಗಾಗಿ ಶ್ರೀಲಂಕಾ ವಿರುದ್ಧದ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅಜರ್ ತಿಳಿಸಿದರು.
ಫಲಿತಾಂಶವನ್ನು ನಮ್ಮ ಕಡೆ ತಿರುಗಿ ಸಬೇಕಾಗಿದೆ. ಗೆಲುವಿನ ಟ್ರ್ಯಾಕ್‌ಗೆ ಮರಳುವುದು ಅತ್ಯಗತ್ಯ. ಈ ಮೂಲಕ ತವರಿನ ಅಭಿಮಾನಿಗಳಲ್ಲಿ ಪಾಕ್ ತಂಡದ ಮೇಲೆ ಅಭಿಮಾನ ಹುಟ್ಟಿ ಸಲು ಪ್ರಯತ್ನಿಸಬೇಕಾಗಿದೆ ಎಂದು ಅಜರ್ ವಿವರಿಸಿದರು.
ಶ್ರೀಲಂಕಾ ಕಠಿನ ತಂಡಶಿಸ್ತುಬದ್ಧ ಕ್ರಿಕೆಟ್ ಆಡುವ ಲಂಕಾ ತಂಡ ಯಾವಾಗಲೂ ಕಠಿನ ತಂಡ. ಪ್ರತಿಯೊಂದು ವಿಭಾಗದಲ್ಲಿ ನಾವು ಕೂಡ ಶಿಸ್ತುಬದ್ಧವಾಗಿ ಆಡಿ ಎದುರಾಳಿ ತಂಡವನ್ನು ಕಟ್ಟಿಹಾಕಬೇಕಾಗಿದೆ. ನಾವು ಒಂದು ಅವಧಿಯಲ್ಲಿ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಒಂದು ಅವಧಿಯಲ್ಲಿ ಸೋಲು ಕಾಣಬಹುದು. ಹಾಗಾಗಿ ಶಿಸ್ತಿನಿಂದ ಆಟವಾಡಿ ಲಂಕಾ ವನ್ನು ಸೋಲಿಸಬೇಕಾಗಿದೆ ಎಂದು ಅಜರ್ ತಿಳಿಸಿದರು. ಮೊದಲ ಟೆಸ್ಟ್ ಪಂದ್ಯವು ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ದ್ವಿತೀಯ ಪಂದ್ಯ ಕರಾಚಿ ಯಲ್ಲಿ ಡಿ. 19ರಿಂದ 23ರ ವರೆಗೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಗವಾಗಿ ಈ ಸರಣಿ ನಡೆಯುತ್ತಿದೆ.