Advertisement
ಪಾಕಿಸ್ಥಾನ ವಿರುದ್ಧದ ದುಬಾೖ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 85 ರನ್ ಬಾರಿಸಿದ ಖ್ವಾಜಾ, ದ್ವಿತೀಯ ಸರದಿಯಲ್ಲಿ 141 ರನ್ ಪೇರಿಸಿ ತಂಡದ ಮರ್ಯಾದೆ ಕಾಪಾಡಿದ್ದರು. ಖ್ವಾಜಾ ರ್‍ಯಾಂಕಿಂಗ್ ಬಡ್ತಿ ಪಡೆದುದರಿಂದ ದಕ್ಷಿಣ ಆಫ್ರಿಕಾ ಆರಂಭಕಾರ ಐಡನ್ ಮಾರ್ಕ್‌ರಮ್ ಟಾಪ್-10 ಯಾದಿಯಿಂದ ಹೊರಬಿದ್ದರು. ಉಳಿದಂತೆ ಟಾಪ್-10 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ.
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನದ ಬೌಲರ್‌ಗಳು ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ದುಬಾೖ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಿತ್ತ ಮೊಹಮ್ಮದ್ ಅಬ್ಟಾಸ್, ವೆಸ್ಟ್ ಇಂಡೀಸಿನ ಜಾಸನ್ ಹೋಲ್ಡರ್ ಜತೆ 13ನೇ ಸ್ಥಾನ ಹಂಚಿಕೊಂಡಿದ್ದಾರೆ. ಚೊಚ್ಚಲ ಟೆಸ್ಟ್ ಆಡಿದ ಬಿಲಾಲ್ ಆಸಿಫ್ 69ನೇ ರ್‍ಯಾಂಕಿಂಗ್‌ನೊಂದಿಗೆ ಖಾತೆ ತೆರೆದಿದ್ದಾರೆ. ಕುಲದೀಪ್ 16 ಸ್ಥಾನ ಜಿಗಿತ
ಭಾರತದ ಕುಲದೀಪ್ ಯಾದವ್ 16 ಸ್ಥಾನಗಳ ಪ್ರಗತಿ ಸಾಧಿಸಿದ್ದು, 52ನೇ ಸ್ಥಾನಕ್ಕೆ ಏರಿದ್ದಾರೆ. ರಾಜ್‌ಕೋಟ್ ಟೆಸ್ಟ್‌ನಲ್ಲಿ ಅವರು ಮೊದಲ ಬಾರಿಗೆ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಉರುಳಿಸಿದ್ದರು.