Advertisement

ICC Test Ranking… ಕೊಹ್ಲಿ , ಜೈಸ್ವಾಲ್‌ ಜಿಗಿತ

11:08 PM Aug 28, 2024 | Team Udayavani |

ದುಬಾೖ: ನೂತನ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಪ್ರಕಟವಾಗಿದೆ. ಇದರಲ್ಲಿ ವಿರಾಟ್‌ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್‌ ಪ್ರಗತಿ ಸಾಧಿಸಿದ್ದಾರೆ. ಕೊಹ್ಲಿ 2, ಜೈಸ್ವಾಲ್‌ ಒಂದು ಸ್ಥಾನ ಜಿಗಿತ ಕಂಡಿದ್ದು, ರೋಹಿತ್‌ ಶರ್ಮ 6ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

Advertisement

ರೋಹಿತ್‌, ಜೈಸ್ವಾಲ್‌ ಮತ್ತು ಕೊಹ್ಲಿ ಕ್ರಮವಾಗಿ 6, 7, 8ನೇ ಸ್ಥಾನ ಪಡೆದಿರುವುದು ವಿಶೇಷ. ಬ್ಯಾಟಿಂಗ್‌ ರ್‍ಯಾಂಕಿಂಗ್‌ನ ಅಗ್ರ 5 ಸ್ಥಾನಗಳಲ್ಲಿ ಕ್ರಮವಾಗಿ ಇಂಗ್ಲೆಂಡ್‌ನ‌ ಜೋ ರೂಟ್‌, ನ್ಯೂಜಿಲ್ಯಾಂಡ್‌ನ‌ ಕೇನ್‌ ವಿಲಿಯಮ್ಸನ್‌, ಡ್ಯಾರಿಲ್‌ ಮಿಚೆಲ್‌, ಇಂಗ್ಲೆಂಡ್‌ನ‌ ಹ್ಯಾರಿ ಬ್ರೂಕ್‌ ಮತ್ತು ಆಸ್ಟ್ರೇಲಿಯದ ಸ್ಟೀವ್‌ ಸ್ಮಿತ್‌ ಇದ್ದಾರೆ. ಟೆಸ್ಟ್‌ ಬೌಲಿಂಗ್‌ ರ್ಯಾಕಿಂಗ್‌ನಲ್ಲಿ ಆರ್‌. ಅಶ್ವಿ‌ನ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಉಳಿದಂತೆ ಜಸ್‌ಪ್ರೀತ್‌ ಬುಮ್ರಾ (3), ರವೀಂದ್ರ ಜಡೇಜ (7) ಅಗ್ರ 10ರಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next