Advertisement
ದಕ್ಷಿಣ ಆಫ್ರಿಕಾದ 242 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ನ್ಯೂಜಿಲ್ಯಾಂಡ್ ದ್ವಿತೀಯ ದಿದನಾಟದಲ್ಲಿ 211ಕ್ಕೆ ಕುಸಿಯಿತು. ಆಫ್ಸ್ಪಿನ್ನರ್ ಡೇನ್ ಪೀಟ್ 5 ವಿಕೆಟ್ ಉರುಳಿಸಿ ಕಿವೀಸ್‌ಗೆ ಬಿಸಿ ಮುಟ್ಟಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆ ಆಗಿದೆ. ಲ್ಯಾಥಂ, ವಿಲಿಯಮ್ಸನ್, ಯಂಗ್, ಫಿಲಿಪ್ಸ್ ಮತ್ತು ವ್ಯಾಗ್ನರ್ ಅವರ ವಿಕೆಟ್‌ಗಳನ್ನು ಪೀಟ್ ತಮ್ಮದಾಗಿಸಿಕೊಂಡರು. ವೇಗಿ ಡೇನ್ ಪೀಟರ್‌ಸನ್ 3 ವಿಕೆಟ್ ಉರುಳಿಸಿದರು.
43 ರನ್ ಮಾಡಿದ ವಿಲಿಯಮ್ಸನ್ ಕಿವೀಸ್ ಸರದಿಯ ಟಾಪ್ ಸ್ಕೋರರ್. ಲ್ಯಾಥಂ 40, ಯಂಗ್ 36, ರಚಿನ್ ರವೀಂದ್ರ 29 ಹಾಗೂ ಕೊನೆಯ ಹಂತದಲ್ಲಿ ಆಕ್ರಮಣ ಕಾರಿಯಾಗಿ ಆಡಿದ ವ್ಯಾಗ್ನರ್ 33 ರನ್ ಮಾಡಿದರು.