Advertisement

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

01:19 AM Sep 29, 2024 | Team Udayavani |

ಗಾಲೆ: ಶ್ರೀಲಂಕಾದ 602 ರನ್ನುಗಳ ಭಾರೀ ಮೊತ್ತಕ್ಕೆ ಜವಾಬು ನೀಡುವಲ್ಲಿ ಸಂಪೂರ್ಣವಾಗಿ ವಿಫ‌ಲ ವಾದ ನ್ಯೂಜಿಲ್ಯಾಂಡ್‌, ಗಾಲೆ ಟೆಸ್ಟ್‌ ಪಂದ್ಯ ದಲ್ಲಿ 88 ರನ್ನಿಗೆ ಉದುರಿ ಫಾಲೋಆನ್‌ಗೆ ತುತ್ತಾಗಿದೆ. ಮಳೆ ಯಿಂದ ಶನಿವಾರದ ಆಟ ಬೇಗನೇ ಕೊನೆಗೊಂಡಾಗ ದ್ವಿತೀಯ ಇನ್ನಿಂಗ್ಸ್‌ ನಲ್ಲಿ 5 ವಿಕೆಟಿಗೆ 199 ರನ್‌ ಗಳಿಸಿತ್ತು. ಇನ್ನೂ 315 ರನ್‌ ಹಿನ್ನಡೆಯಲ್ಲಿದೆ.

Advertisement

ಶನಿವಾರದ ಆಟವೊಂದರಲ್ಲೇ ನ್ಯೂಜಿ ಲ್ಯಾಂಡ್‌ 13 ವಿಕೆಟ್‌ಗಳನ್ನು ಕಳೆದು ಕೊಂಡಿತು. ಎಡಗೈ ಸ್ಪಿನ್ನರ್‌ ಪ್ರಭಾತ್‌ ಜಯಸೂರ್ಯ 6 ವಿಕೆಟ್‌ ಉಡಾಯಿಸಿ ನ್ಯೂಜಿಲ್ಯಾಂಡ್‌ಗೆ ದುಃಸ್ವಪ್ನವಾಗಿ ಕಾಡಿ ದರು. ಇದರಿಂದ ಶ್ರೀಲಂಕಾ ತನ್ನ ಟೆಸ್ಟ್‌ ಇತಿಹಾಸದಲ್ಲೇ ಅತ್ಯಧಿಕ 514 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಇದು ನ್ಯೂಜಿಲ್ಯಾಂಡ್‌ಗೆ ಎದುರಾದ 2ನೇ ಬೃಹತ್‌ ಮೊತ್ತದ ಹಿನ್ನಡೆ. ಪಾಕಿಸ್ಥಾನ ಎದುರಿನ 2002ರ ಲಾಹೋರ್‌ ಟೆಸ್ಟ್‌ ನಲ್ಲಿ ಕಿವೀಸ್‌ ಪಡೆ 570 ರನ್ನುಗಳ ಹಿನ್ನಡೆಗೆ ಸಿಲುಕಿತ್ತು. ಅತ್ಯಧಿಕ ಮೊತ್ತದ ಲೀಡ್‌ ಗಳಿಸಿದ ದಾಖಲೆ ಇಂಗ್ಲೆಂಡ್‌ ಹೆಸರಲ್ಲಿದೆ. 1938ರ ಆ್ಯಶಸ್‌ ಸರಣಿಯ ಓವಲ್‌ ಟೆಸ್ಟ್‌ನಲ್ಲಿ ಅದು 702 ರನ್ನುಗಳ ಮುನ್ನಡೆ ಸಂಪಾದಿಸಿತ್ತು.

ಶ್ರೀಲಂಕಾ ಸರದಿಯಲ್ಲಿ ಮೂವರಿಂದ ಶತಕ ದಾಖಲಾದರೆ, ನ್ಯೂಜಿಲ್ಯಾಂಡ್‌ನ‌ ಒಟ್ಟು ಮೊತ್ತವೇ ನೂರರ ಗಡಿ ತಲುಪದಿದ್ದುದೊಂದು ವಿಪರ್ಯಾಸ. ಮೊದಲ ಓವರ್‌ನಲ್ಲೇ ಟಾಮ್‌ ಲ್ಯಾಥಂ ಅವರನ್ನು ಕಳೆದುಕೊಂಡ ಕಿವೀಸ್‌ ಅನಂತರ ಚೇತರಿಸಿಕೊಳ್ಳಲೇ ಇಲ್ಲ. ಮಿಚೆಲ್‌ ಸ್ಯಾಂಟ್ನರ್‌ ಸರ್ವಾಧಿಕ 29 ರನ್‌ ಮಾಡಿದರು.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಟಾಮ್‌ ಲ್ಯಾಥಂ ಪ್ರಥಮ ಓವರ್‌ನಲ್ಲೇ ಔಟಾದರು. ಆದರೆ ಡೇವನ್‌ ಕಾನ್ವೇ (61)-ಕೇನ್‌ ವಿಲಿಯಮ್ಸನ್‌ (46) 97 ರನ್ನುಗಳ ಜತೆಯಾಟ ನಿಭಾಯಿಸಿದರು. ಈ ಜೋಡಿ ಬೇರ್ಪಟ್ಟ ಬಳಿಕ ಮತ್ತೂಂದು ಕ್ಷಿಪ್ರ ಕುಸಿತ ಸಂಭವಿಸಿತು. ಸ್ಕೋರ್‌ 121 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಉರುಳಿತು. 6ನೇ ವಿಕೆಟಿಗೆ ಜತೆಗೂಡಿದ ಟಾಮ್‌ ಬ್ಲಿಂಡೆಲ್‌ (ಬ್ಯಾಟಿಂಗ್‌ 47) ಮತ್ತು ಗ್ಲೆನ್‌ ಫಿಲಿಪ್ಸ್‌ (ಬ್ಯಾಟಿಂಗ್‌ 32) ಸೇರಿಕೊಂಡು ಮೊತ್ತವನ್ನು 199ಕ್ಕೆ ಏರಿಸಿದ್ದಾರೆ.

ಕ್ಯಾಚ್‌ ದಾಖಲೆ
ನ್ಯೂಜಿಲ್ಯಾಂಡ್‌ನ‌ ಮೊದಲ ಇನ್ನಿಂಗ್ಸ್‌ ವೇಳೆ ಪ್ರಭಾತ್‌ ಜಯಸೂರ್ಯ ಬೌಲಿಂಗ್‌ ನಲ್ಲಿ ಧನಂಜಯ ಡಿ ಸಿಲ್ವ 5 ಕ್ಯಾಚ್‌ ಪಡೆದರು. ಇದು ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ ನಿರ್ದಿಷ್ಟ ಬೌಲರ್‌ನ ಎಸೆತಗಳಲ್ಲಿ ಫೀಲ್ಡರ್‌/ವಿಕೆಟ್‌ ಕೀಪರ್‌ ಪಡೆದ ಅತ್ಯಧಿಕ ಕ್ಯಾಚ್‌ಗಳ ಜಂಟಿ ದಾಖಲೆಯ 5ನೇ ನಿದರ್ಶನ.

Advertisement

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-5 ವಿಕೆಟಿಗೆ 602 ಡಿಕ್ಲೇರ್‌. ನ್ಯೂಜಿಲ್ಯಾಂಡ್‌-88 (ಸ್ಯಾಂಟ್ನರ್‌ 29, ಮಿಚೆಲ್‌ 23, ಜಯಸೂರ್ಯ 42ಕ್ಕೆ 6, ನಿಶಾನ್‌ ಪೈರಿಸ್‌ 33ಕ್ಕೆ 3) ಮತ್ತು 5 ವಿಕೆಟಿಗೆ 199 (ಕಾನ್ವೇ 61, ವಿಲಿಯಮ್ಸನ್‌ 46, ಬ್ಲಿಂಡೆಲ್‌ ಬ್ಯಾಟಿಂಗ್‌ 47, ಫಿಲಿಪ್ಸ್‌ ಬ್ಯಾಟಿಂಗ್‌ 32, ಪೈರಿಸ್‌ 91ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next