Advertisement
ಶನಿವಾರದ ಆಟವೊಂದರಲ್ಲೇ ನ್ಯೂಜಿ ಲ್ಯಾಂಡ್ 13 ವಿಕೆಟ್‌ಗಳನ್ನು ಕಳೆದು ಕೊಂಡಿತು. ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ 6 ವಿಕೆಟ್ ಉಡಾಯಿಸಿ ನ್ಯೂಜಿಲ್ಯಾಂಡ್‌ಗೆ ದುಃಸ್ವಪ್ನವಾಗಿ ಕಾಡಿ ದರು. ಇದರಿಂದ ಶ್ರೀಲಂಕಾ ತನ್ನ ಟೆಸ್ಟ್ ಇತಿಹಾಸದಲ್ಲೇ ಅತ್ಯಧಿಕ 514 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಇದು ನ್ಯೂಜಿಲ್ಯಾಂಡ್‌ಗೆ ಎದುರಾದ 2ನೇ ಬೃಹತ್ ಮೊತ್ತದ ಹಿನ್ನಡೆ. ಪಾಕಿಸ್ಥಾನ ಎದುರಿನ 2002ರ ಲಾಹೋರ್ ಟೆಸ್ಟ್ ನಲ್ಲಿ ಕಿವೀಸ್ ಪಡೆ 570 ರನ್ನುಗಳ ಹಿನ್ನಡೆಗೆ ಸಿಲುಕಿತ್ತು. ಅತ್ಯಧಿಕ ಮೊತ್ತದ ಲೀಡ್ ಗಳಿಸಿದ ದಾಖಲೆ ಇಂಗ್ಲೆಂಡ್ ಹೆಸರಲ್ಲಿದೆ. 1938ರ ಆ್ಯಶಸ್ ಸರಣಿಯ ಓವಲ್ ಟೆಸ್ಟ್‌ನಲ್ಲಿ ಅದು 702 ರನ್ನುಗಳ ಮುನ್ನಡೆ ಸಂಪಾದಿಸಿತ್ತು.
Related Articles
ನ್ಯೂಜಿಲ್ಯಾಂಡ್‌ನ ಮೊದಲ ಇನ್ನಿಂಗ್ಸ್ ವೇಳೆ ಪ್ರಭಾತ್ ಜಯಸೂರ್ಯ ಬೌಲಿಂಗ್ ನಲ್ಲಿ ಧನಂಜಯ ಡಿ ಸಿಲ್ವ 5 ಕ್ಯಾಚ್ ಪಡೆದರು. ಇದು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ನಿರ್ದಿಷ್ಟ ಬೌಲರ್‌ನ ಎಸೆತಗಳಲ್ಲಿ ಫೀಲ್ಡರ್/ವಿಕೆಟ್ ಕೀಪರ್ ಪಡೆದ ಅತ್ಯಧಿಕ ಕ್ಯಾಚ್‌ಗಳ ಜಂಟಿ ದಾಖಲೆಯ 5ನೇ ನಿದರ್ಶನ.
Advertisement
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-5 ವಿಕೆಟಿಗೆ 602 ಡಿಕ್ಲೇರ್. ನ್ಯೂಜಿಲ್ಯಾಂಡ್-88 (ಸ್ಯಾಂಟ್ನರ್ 29, ಮಿಚೆಲ್ 23, ಜಯಸೂರ್ಯ 42ಕ್ಕೆ 6, ನಿಶಾನ್ ಪೈರಿಸ್ 33ಕ್ಕೆ 3) ಮತ್ತು 5 ವಿಕೆಟಿಗೆ 199 (ಕಾನ್ವೇ 61, ವಿಲಿಯಮ್ಸನ್ 46, ಬ್ಲಿಂಡೆಲ್ ಬ್ಯಾಟಿಂಗ್ 47, ಫಿಲಿಪ್ಸ್ ಬ್ಯಾಟಿಂಗ್ 32, ಪೈರಿಸ್ 91ಕ್ಕೆ 3).