Advertisement

Test match: ಶಕೀಲ್‌, ರಿಜ್ವಾನ್‌ ಶತಕ ಸಂಭ್ರಮ

12:22 AM Aug 23, 2024 | Team Udayavani |

ರಾವಲ್ಪಿಂಡಿ: ಮಧ್ಯಮ ಕ್ರಮಾಂಕದ ಆಟಗಾರರಾದ ಸೌದ್‌ ಶಕೀಲ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಅವರ ಆಕರ್ಷಕ ಶತಕದ ನೆರವಿನಿಂದ ಪಾಕಿಸ್ಥಾನ ತಂಡವು ಪ್ರವಾಸಿ ಬಾಂಗ್ಲಾ ದೇಶ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಪಂದ್ಯದ ದ್ವಿತೀಯ ದಿನವಾದ ಗುರು ವಾರ ಆರು ವಿಕೆಟಿಗೆ 448 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಅನ್ನು ಡಿಕ್ಲೇರ್‌ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿರುವ ಬಾಂಗ್ಲಾ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 27 ರನ್‌ ಗಳಿಸಿದೆ.

Advertisement

ಶಕೀಲ್‌, ರಿಜ್ವಾನ್‌ ಆಸರೆ
ನಾಲ್ಕು ವಿಕೆಟಿಗೆ 158 ರನ್ನುಗಳಿಂದ ದಿನನಾಟ ಆರಂಭಿಸಿದ ಪಾಕಿಸ್ಥಾನ ತಂಡವನ್ನು ಶಕೀಲ್‌ ಮತ್ತು ರಿಜ್ವಾನ್‌ ಆಧರಿಸಿದರು. ಬಾಂಗ್ಲಾ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರಿಬ್ಬರು ಐದನೇ ವಿಕೆಟಿಗೆ 240 ರನ್ನುಗಳ ಜತೆಯಾಟ ನಡೆಸಿ ತಂಡದ ಉತ್ತಮ ಮೊತ್ತಕ್ಕೆ ದೊಡ್ಡ ಕೊಡುಗೆ ಸಲ್ಲಿಸಿದರು. ಒಂಟಿ ರನ್ನಿಗೆ ಹೆಚ್ಚಿನ ಮಹತ್ವ ನೀಡಿದ ಸೌದ್‌ ಶಕೀಲ್‌ 261 ಎಸೆತ ಎದುರಿಸಿ ಕೇವಲ 9 ಬೌಂಡರಿ ನೆರವಿನಿಂದ 141 ರನ್‌ ಗಳಿಸಿ ಔಟಾದರು.

ಶಕೀಲ್‌ ಔಟಾದ ಸ್ವಲ್ವ ಹೊತ್ತಿನಲ್ಲಿ ಪಾಕಿಸ್ಥಾನ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವ ನಿರ್ಧಾರ ಮಾಡಿತು. ಆಗ ತಂಡ ಆರು ವಿಕೆಟಿಗೆ 448 ರನ್‌ ಗಳಿಸಿತ್ತು. ಈ ವೇಳೆ ಇನ್ನೋರ್ವ ಶತಕವೀರ ರಿಜ್ವಾನ್‌ 171 ರನ್‌ ಗಳಿಸಿ ಆಡುತ್ತಿದ್ದರು.
ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ ಆರು ವಿಕೆಟಿಗೆ 448 ಡಿಕ್ಲೇರ್‌x (ಸೈಮ್‌ ಆಯುಬ್‌ 56, ಸೌದ್‌ ಶಕೀಲ್‌ 141, ರಿಜ್ವಾನ್‌ 171 ಔಟಾಗದೆ) ಬಾಂಗ್ಲಾ ವಿಕೆಟ್‌ ಕಳೆದುಕೊಳ್ಳದೇ 27 ರನ್‌.

ನಾಲ್ವರು ಕುಸ್ತಿಪಟುಗಳಿಗೆ ಪ್ರಶಸ್ತಿ
ಅಮ್ಮಾನ್‌, ಆ. 22: ಅಂಡರ್‌ -17 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ವನಿತೆಯರು ಅಮೋಘ ನಿರ್ವಹಣೆ ನೀಡಿದ್ದಾರೆ. ನಾಲ್ಕು ಕುಸ್ತಿಪಟುಗಳು ಅಂಡರ್‌-17 ವಿಶ್ವ ಚಾಂಪಿಯನ್‌ ಆಗಿದ್ದಾರೆ. ಅದಿತಿ ಕುಮಾರಿ (43 ಕೆ.ಜಿ.), ನೇಹಾ (57 ಕೆ.ಜಿ.), ಪುಲ್ಕಿಟ್‌ (65 ಕೆ.ಜಿ.) ಮತ್ತು ಮಾನಸಿ ಲಾಥೆರ್‌ (73 ಕೆ.ಜಿ.) ತಮ್ಮ ವಿಭಾಗದಲ್ಲಿ ವಿಶ್ವ ಪ್ರಶಸ್ತಿ ಗೆದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next