Advertisement

ವನಿತಾ ಕ್ರಿಕೆಟ್‌ ತಂಡಗಳಿಗೆ ಟೆಸ್ಟ್‌ ಮಾನ್ಯತೆ

11:31 PM Apr 02, 2021 | Team Udayavani |

ದುಬಾೖ : ಐಸಿಸಿ ತನ್ನ ಪೂರ್ಣ ಪ್ರಮಾಣದ ಸದಸ್ಯತ್ವ ಹೊಂದಿರುವ ಕ್ರಿಕೆಟ್‌ ರಾಷ್ಟ್ರಗಳಿಗೆ ಏಕದಿನ ಮತ್ತು ಟೆಸ್ಟ್‌ ಮಾನ್ಯತೆ ನೀಡಲು ನಿರ್ಧರಿಸಿದೆ. ಇದರಂತೆ ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ಅಫ್ಘಾನಿಸ್ಥಾನ ವನಿತಾ ತಂಡಗಳಿನ್ನು ಟೆಸ್ಟ್‌ ಪಂದ್ಯವನ್ನು ಆಡಬಹುದಾಗಿದೆ.

Advertisement

ಈ ವರೆಗೆ ಕೇವಲ 10 ವನಿತಾ ತಂಡಗಳಷ್ಟೇ ಟೆಸ್ಟ್‌ ಪಂದ್ಯಗಳನ್ನಾಡು ತ್ತಿದ್ದವು. ಇವುಗಳೆಂದರೆ ಭಾರತ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ನೆದ ರ್ಲೆಂಡ್ಸ್‌, ಐರ್ಲೆಂಡ್‌, ಇಂಗ್ಲೆಂಡ್‌, ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ. ಈ ಸಾಲಿಗೆ 3 ನೂತನ ರಾಷ್ಟ್ರಗಳ ಸೇರ್ಪಡೆಯಾಗಿದೆ.

ಇವುಗಳಲ್ಲಿ ಬಾಂಗ್ಲಾದೇಶ ವನಿತಾ ತಂಡಕ್ಕೆ 2011ರಲ್ಲಿ ಏಕದಿನ ಮಾನ್ಯತೆ ಲಭಿಸಿತ್ತು. 2018ರಲ್ಲಿ ಮಲೇಶ್ಯದಲ್ಲಿ ನಡೆದ ವನಿತಾ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್‌ ಎನಿಸಿದ್ದು ಬಾಂಗ್ಲಾದ ಗಮನಾರ್ಹ ಸಾಧನೆಯಾಗಿತ್ತು. ಆದರೆ ಬಾಂಗ್ಲಾದೇಶ ವನಿತೆಯರು ಈ ವರೆಗೆ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಆಡಿಲ್ಲ. ಇನ್ನು ಈ ಅವಕಾಶ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next