Advertisement

Test; ಅಫ್ಘಾನಿಸ್ಥಾನ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದ ಲಂಕಾ

11:19 PM Feb 05, 2024 | Team Udayavani |

ಕೊಲಂಬೊ: ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯವನ್ನು ಶ್ರೀಲಂಕಾ 10 ವಿಕೆಟ್‌ಗಳಿಂದ ಜಯಿಸಿದೆ. ಗೆಲುವಿಗೆ 56 ರನ್‌ ಮಾಡಬೇಕಿದ್ದ ಲಂಕಾ, ವಿಕೆಟ್‌ ನಷ್ಟವಿಲ್ಲದೆ ಗುರಿ ಮುಟ್ಟಿತು.

Advertisement

ಆರಂಭಕಾರ ಇಬ್ರಾಹಿಂ ಜದ್ರಾನ್‌ ಅವರ ಶತಕ ಸಾಹಸದಿಂದ ಇನ್ನಿಂಗ್ಸ್‌ ಸೋಲಿನಿಂದ ಪಾರಾದುದೇ ಅಫ್ಘಾನ್‌ ಸಾಧನೆ ಎನಿಸಿತು. ಪ್ರವಾಸಿ ತಂಡ 241 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿತ್ತು. ದ್ವಿತೀಯ ಸರದಿಯಲ್ಲಿ 296ರ ತನಕ ಸಾಗಿತು. ಇದರಲ್ಲಿ ಇಬ್ರಾಹಿಂ ಜದ್ರಾನ್‌ ಕೊಡುಗೆ 114 ರನ್‌. ಇದು ಅವರ ಚೊಚ್ಚಲ ಟೆಸ್ಟ್‌ ಶತಕ. 259 ಎಸೆತಗಳನ್ನು ಎದುರಿಸಿದ ನಿಂತ ಅಫ್ಘಾನ್‌ ಆರಂಭಕಾರ 12 ಬೌಂಡರಿ ಬೀಸಿದರು. ಮೊದಲ ಸರದಿಲ್ಲಿ ಜದ್ರಾನ್‌ ಖಾತೆ ತೆರೆಯಲು ವಿಫ‌ಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next