Advertisement

ಪರೀಕ್ಷಾ ಕಿಟ್‌ಗಳು ದೋಷಪೂರಿತ; ಚೀನಕ್ಕೆ ಬ್ರಿಟನ್‌ ಗುದ್ದು

10:09 AM Apr 09, 2020 | mahesh |

ಲಂಡನ್‌: ಚೀನದಿಂದ ಖರೀದಿಸಿರುವ ಕೋವಿಡ್‌-19 ಪರೀಕ್ಷಿಸುವ ಕಿಟ್‌ಗಳು ವಿಶ್ವಾಸಾರ್ಹವಾಗಿಲ್ಲ ಮತ್ತು ಕಳಪೆ ಗುಣಮಟ್ಟದ್ದು ಎಂದು ಬ್ರಿಟನ್‌ ಆರೋಪಿಸಿದೆ.  ಸದ್ಯ ಚೀನ ಕೊಡ ಮಾಡಿದ ಈ ಕಿಟ್‌ ಗಳು ಕೋವಿಡ್‌-19 ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಗುರುತಿಸಲು ಮಾತ್ರ ಬಳಸಬಹುದಾಗಿದೆ. ಬೇರಾವ ಉದ್ದೇಶಕ್ಕೂ ಬಾರದು ಎಂದಿದೆ.

Advertisement

ಈ ಕಿಟ್‌ಗಳನ್ನು ಬಳಸಿ ಆರಂಭಿಕ ಹಂತದ ಮೌಲ್ಯ ಮಾಪನ ಮಾಡಬಹುದು. ದೊಡ್ಡ ಪ್ರಯೋಜ ನವನ್ನು ಇದರಿಂದ ನಿರೀಕ್ಷಿಸಲಾಗದು. ಇದರಲ್ಲಿ ಅನೇಕ ತಪ್ಪಾದ ಫಲಿತಾಂಶ ಬಂದಿವೆ ಎಂದಿದೆ.  ಪರೀಕ್ಷೆ ಕಿಟ್‌ಗಳು ಸಮರ್ಪಕವಾಗಿಲ್ಲ. ಹಾಗಾಗಿ, ನಾವು ನೀಡಿದ ಹಣವನ್ನು ಮರು ಪಾವತಿಸುವಂತೆ ಕೇಳಲಿದ್ದೇವೆ’ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಬ್ರಿಟನ್‌ ಗಿಂತ ಮೊದಲೇ ಜೆಕ್‌ ಗಣರಾಜ್ಯ ದೂಷಿಸಿತ್ತು. 1.50 ಲಕ್ಷ ಕಿಟ್‌ ಖರೀದಿಸಿದ್ದ ರಿಪಬ್ಲಿಕ್‌ ಜೆಕ್‌, ಅದರಲ್ಲಿ ಶೇ. 80ರಷ್ಟು ದೋಷಪೂರಿತವಾಗಿತ್ತು ಎಂದು ತಿಳಿಸಿತ್ತು. ಸ್ಪೇನ್‌, ನೆದರ್‌ಲ್ಯಾಂಡ್‌ ಸಹ ಚೀನದ ಕಂಪೆನಿಗಳು ವಿತರಿಸಿದ ಸಾವಿರಾರು ವೈದ್ಯಕೀಯ ಉಪಕರಣಗಳು ದೋಷಪೂರಿತ ಎಂದು ತಿರಸ್ಕರಿಸಿದ್ದವು. ಬ್ರಿಟನ್‌ ಸರಕಾರವು ಕಳೆದ ತಿಂಗಳು 3.5 ಮಿಲಿಯನ್‌ ಕಿಟ್‌ ಗಳಿಗೆ ಆದೇಶಿಸಿತ್ತು.

ಚೀನ ಈಗ ಕೋವಿಡ್‌ 19ರ ವಿರುದ್ಧ ಹೋರಾಡು ತ್ತಿರುವ ರಾಷ್ಟ್ರಗಳಿಗೆ ನೆರವಿನ ಹಸ್ತ ನೀಡಲು ಮುಂದಾ ಗಿದೆ. ಯುರೋಪ್‌, ಉತ್ತರ ಅಮೆರಿಕಾ ಮತ್ತು ಹಲವು ರಾಷ್ಟ್ರ ಗಳಿಗೆ ಪರೀಕ್ಷಾ ಕಿಟ್‌ ಸೇರಿದಂತೆ ವಿವಿಧ ರೀತಿಯ ಸಹಾ ಯಗಳಿಗೆ ಮುಂದಾಗಿದ್ದು, ಆ ರಾಷ್ಟ್ರಗಳ ಅಭಿಪ್ರಾಯ ಏನು ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next