Advertisement

ಟೆಸ್ಟ್‌ ಭವಿಷ್ಯ ಭಾರತದ ಕೈಯಲ್ಲಿದೆ: ಚಾಪೆಲ್‌

12:56 AM May 16, 2020 | Sriram |

ಸಿಡ್ನಿ: ಕೋವಿಡ್-19 ವೈರಸ್‌ ಕ್ರಿಕೆಟ್‌ ಲೋಕವನ್ನು ಸ್ತಬ್ಧವಾಗಿಸಿದ್ದು, ಕ್ರಿಕೆಟ್‌ ಚಟುವಟಿಕೆಗಳನ್ನು ಮರಳಿ ಯಥಾಸ್ಥಿತಿಗೆ ತರಬೇಕಾದರೆ ಭಾರತ ಅತ್ಯಂತ ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಗ್ರೆಗ್‌ ಚಾಪೆಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತ ಕೈಬಿಟ್ಟರೆ ಟೆಸ್ಟ್‌ ಕ್ರಿಕೆಟಿಗೆ ಪ್ರಬಲ ಹೊಡೆತ ಬೀಳುವುದು ಖಚಿತ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತೆ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಡೆಗೆ ಇಂಗ್ಲೆಂಡ್‌, ಆಸ್ಟ್ರೇಲಿಯ ಮತ್ತು ಭಾರತ (ಬಿಸಿಸಿಐ) ಬಿಟ್ಟರೆ ಬೇರೆ ಯಾವ ದೇಶಗಳು ಕೂಡ ಹೆಚ್ಚು ಹಣ ಖರ್ಚು ಮಾಡುತ್ತಿಲ್ಲ ಎಂದು ಪ್ಲೇರೈಟ್‌ ಫೌಂಡೇಶನ್‌ ಜತೆ ನಡೆದ ಸಂದರ್ಶನದಲ್ಲಿ ಚಾಪೆಲ್‌ ಈ ವಿಚಾರವನ್ನು ಹೇಳಿದ್ದಾರೆ.

ಟಿ20 ಕ್ರಿಕೆಟಿಗೆ ನನ್ನ ಯಾವುದೇ ವಿರೋಧವಿಲ್ಲ. ಜನಸಾಮಾನ್ಯರಲ್ಲಿ ಕ್ರಿಕೆಟ್‌ ಮಾರಾಟ ಮಾಡಲು ಅದು ಉತ್ತಮ ವಿಧಾನ. ಟೆಸ್ಟ್‌ ಕ್ರಿಕೆಟ್‌ ಆಯೋಜನೆಗೆ ಹಣಕಾಸು ನಿರ್ವಹಣೆ ದೊಡ್ಡಮಟ್ಟದಲ್ಲಿ ಇರುತ್ತದೆ. ಹೀಗಾಗಿ ಪ್ರತಿಫ‌ಲ ಕಡಿಮೆ ಇದ್ದರೂ ಟೆಸ್ಟ್‌ ನಡೆಯಬೇಕು ಎಂದು ಅವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next