ಕಲಬುರಗಿ: ಮಹತ್ವದ ಇಂಜಿನಿಯರಿಂಗ್, ಬಿಎಸ್ಸಿ ಕೃಷಿ (ಕೃಷಿ ವಿಜ್ಞಾನ)ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಾತಿಯ ಸಿಇಟಿಪರೀಕ್ಷೆ ಗೊಂದಲದ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಬಿಎಸ್ಸಿ ಕೃಷಿ, ಪಶು ಸಂಗೋಪನಾ ಹಾಗೂ ತೋಟಗಾರಿಕೆ ಸೇರಿ ಇತರ ಕೋರ್ಸುಗಳಲ್ಲಿ ರೈತರ ಮಕ್ಕಳಿಗೆ ಶೇ. 40ರಷ್ಟು ಮೀಸಲಾತಿ ಸೀಟುಗಳಿಗೆ ಪರೀಕ್ಷೆ ನಡೆಸಲು ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿಗೆ ಮುಂಚೆರೈತರ ಮಕ್ಕಳ ಕೋಟಾದಡಿ ಸೀಟುಗಳಿಗೆ ಈ ಹಿಂದಿನಿಂದಲೂ ಪರೀಕ್ಷೆ ನಡೆಸಿ, ಈ ಫಲಿತಾಂಶದೊಂದಿಗೆ ಸಿಇಟಿ ಫಲಿತಾಂಶಆಧರಿಸಿ ರ್‍ಯಾಂಕ್ ಪ್ರಕಟಿಸುತ್ತಾ ಬರಲಾಗುತ್ತಿದೆ.ಆದರೆ ಕಳೆದ ವರ್ಷ ಈ ಪರೀಕ್ಷೆಯನ್ನೇರದ್ದುಪಡಿಸಲಾಗಿತ್ತು.
ಪ್ರಸಕ್ತ ವರ್ಷ ಪರೀಕ್ಷೆ ನಡೆಸುವುದನ್ನು ಚಾಲ್ತಿಗೆ ತರಲಾಗಿದೆ.ಬಿಎಸ್ಸಿ ಕೃಷಿ, ಪಶು ಸಂಗೋಪನಾಹಾಗೂ ತೋಟಗಾರಿಕಾ ಪದವಿಗಳಪ್ರವೇಶಾತಿಯಲ್ಲಿ ಶೇ. 25ರಷ್ಟು ಸಿಇಟಿ ಅಂಕ,ಶೇ. 25ರಷ್ಟು ಪಿಯುಸಿಯಲ್ಲಿನ ವಿಷಯಗಳ ಥೇರಿಅಂಕಗಳನ್ನು ಪರಿಗಣಿಸಿದರೆ ಇನ್ನುಳಿದ ಶೇ. 50ರಷ್ಟು ಅಂಕಗಳನ್ನುರೈತರ ಮಕ್ಕಳಿಗೆ ಪ್ರಾತ್ಯಕ್ಷಿಕವಾಗಿ(ಪ್ರಾಯೋಗಿಕ) ಪರೀಕ್ಷೆ ನಡೆಸಿ ಅಂಕಗಳನ್ನು ನಿಗದಿ ಮಾಡಲಾಗುತ್ತದೆ.ಆದರೆ ಕಳೆದ ವರ್ಷ ಮಾತ್ರ ರೈತರ ಮಕ್ಕಳ ಕೋಟಾ ಪರೀಕ್ಷೆಯನ್ನೇರದ್ದು ಮಾಡಲಾಗಿತ್ತು. ಕೊವಿಡ್-19 ಹಿನ್ನೆಲೆಯಲ್ಲಿ ಪ್ರಾಯೋಗಿಕಪರೀಕ್ಷೆಯನ್ನೇ ನಡೆಸಿರಲಿಲ್ಲ.
ಪರೀಕ್ಷೆ ರದ್ದಾದ ಕುರಿತು ಕಳೆದ2020ರ ಆಗಸ್ಟ್ 21ರಂದು “ಉದಯವಾಣಿ’ಯಲ್ಲಿ ವಿಶೇಷ ವರದಿಪ್ರಕಟಿಸಲಾಗಿತ್ತು. ಪರೀಕ್ಷೆ ರದ್ದಾಗಿರುವುದಕ್ಕೆ ರೈತ ವಲಯದಿಂದ ತೀವ್ರಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ವರ್ಷದಿಂದ ಮತ್ತೆ ಪರೀಕ್ಷೆ ಜಾರಿಗೆತರಲಾಗಿದೆ.ರೈತರ ಮಕ್ಕಳು ನಗರ ಪ್ರದೇಶದಲ್ಲಿ ಓದುತ್ತಿದ್ದಾರೆ. ಆದರೆ ಗ್ರಾಮೀಣಭಾಗದಲ್ಲಿದ್ದುಕೊಂಡು ಪಿಯುಸಿಯಲ್ಲಿ ಉತ್ತಮ ಫಲಿತಾಂಶಪಡೆದಿರುವ ಮಕ್ಕಳು ವಿವಿಗಳು ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿಕೃಷಿ ಉಪಕರಣಗಳು, ರಸಗೊಬ್ಬರ ಸೇರಿ ಕೃಷಿಗೆ ಸಂಬಂಧಿಸಿದಂತೆ ಎಲ್ಲಮಾಹಿತಿಯನ್ನು ಸರಳವಾಗಿ ಹೇಳುತ್ತಾರೆ. ಆದರೆ ನಗರದಲ್ಲಿದ್ದುಕೊಂಡುಓದಿದ ಮಕ್ಕಳಿಗೆ ಕಷ್ಟವಾಗುತ್ತದೆ.
ರೈತರ ಮಕ್ಕಳಿಗೆ ಅನುಕೂಲವಾಗಲೆಂದೇನಿಯಮ ಹಾಗೂ ಕಾನೂನು ಜಾರಿಗೆ ತರಲಾಗಿದೆ. ಆದರೆ ಕಳೆದ ವರ್ಷಅನೇಕ ಕಾರಣಗಳನ್ನು ನೀಡಿ ಪರೀಕ್ಷೆ ರದ್ದುಪಡಿಸಲಾಗಿತ್ತು. ಈ ವರ್ಷಸಿಇಟಿ ನಡೆಸುವ ಮುಂಚೆಯೇ ರೈತರ ಮಕ್ಕಳ ಕೋಟಾದಡಿ ಪರೀಕ್ಷೆನಡೆಸಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯಾದ್ಯಂತ ರೈತ ಮಕ್ಕಳಿಗೆ ಸುಮಾರು ಮೂರು ಸಾವಿರ ಬಿಎಸ್ಸಿ ಕೃಷಿ, ಪಶು ಹಾಗೂ ತೋಟಗಾರಿಕಾಪದವಿಗಳ ಸೀಟುಗಳು ಸಿಗಲಿವೆ.ಕಳೆದ ವರ್ಷ ರದ್ದಾದ ಮಕ್ಕಳ ಕೋಟಾದ ಸೀಟುಗಳಿಗೆ ಈ ವರ್ಷಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ರೈತರು ಹಾಗೂ ಬಿಎಸ್ಸಿ ಕೃಷಿ,ಪಶು ಸಂಗೋಪನಾ ಹಾಗೂ ತೋಟಗಾರಿಕೆ ಪದವಿ ಪ್ರವೇಶಾತಿಬಯಸಿರುವ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಹಣಮಂತರಾವ ಭೈರಾಮಡಗಿ