Advertisement

Test: ಐರ್ಲೆಂಡ್‌ಗೆ ಮೊದಲ  ಗೆಲುವು

12:31 AM Mar 02, 2024 | Team Udayavani |

ಅಬುಧಾಬಿ: ಐರ್ಲೆಂಡ್‌ ತನ್ನ ಟೆಸ್ಟ್‌ ಇತಿಹಾಸದ ಮೊದಲ ಗೆಲುವನ್ನು ದಾಖಲಿಸಿದೆ. ಅಬುಧಾಬಿಯಲ್ಲಿ ನಡೆದ ಅಫ್ಘಾನಿಸ್ಥಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದು ಸಂಭ್ರಮಿಸಿದೆ.

Advertisement

111 ರನ್‌ ಗೆಲುವಿನ ಗುರಿ ಪಡೆದ ಐರ್ಲೆಂಡ್‌, 4 ವಿಕೆಟ್‌ ನಷ್ಟದಲ್ಲಿ ಇದನ್ನು ಸಾಧಿಸಿತು. 13 ರನ್ನಿಗೆ 3 ವಿಕೆಟ್‌ ಬಿದ್ದಾಗ ಐರ್ಲೆಂಡ್‌ ಆತಂಕಕ್ಕೆ ಸಿಲುಕಿತ್ತು. ಆದರೆ ಕಪ್ತಾನನ ಆಟವಾಡಿದ ಆರಂಭಕಾರ ಆ್ಯಂಡ್ರೂé ಬಾಲ್ಬಿರ್ನಿ ಅಜೇಯ 58 ರನ್‌ ಬಾರಿಸಿ ತಂಡವನ್ನು ದಡ ಸೇರಿಸಿದರು. ಇವರೊಂದಿಗೆ ಲೋರ್ಕಾನ್‌ ಟ್ಯುಕರ್‌ 27 ರನ್‌ ಗಳಿಸಿ ಅಜೇಯರಾಗಿದ್ದರು. ಇವರಿಬ್ಬರ ನಡುವೆ 72 ರನ್‌ ಜತೆಯಾಟ ನಡೆಯಿತು.

ಅಫ್ಘಾನಿಸ್ಥಾನ ಮತ್ತು ಐರ್ಲೆಂಡ್‌ 2017ರಲ್ಲಿ ಒಟ್ಟಿಗೇ ಟೆಸ್ಟ್‌ ಮಾನ್ಯತೆ ಪಡೆದಿದ್ದವು. ಐರ್ಲೆಂಡ್‌ ಇಂದಿನ ಗೆಲುವಿಗೂ ಮುನ್ನ ಸತತ 7 ಸೋಲು ಅನುಭವಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿಸ್ಥಾನ-155 ಮತ್ತು 218. ಐರ್ಲೆಂಡ್‌-263 ಮತ್ತು 4 ವಿಕೆಟಿಗೆ 111. ಪಂದ್ಯಶ್ರೇಷ್ಠ: ಮಾರ್ಕ್‌ ಅಡೈರ್‌.

Advertisement

Udayavani is now on Telegram. Click here to join our channel and stay updated with the latest news.

Next