Advertisement

Test ಬ್ಯಾಟಿಂಗ್‌ ರ್‍ಯಾಂಕಿಂಗ್‌ : 12ನೇ ಸ್ಥಾನಕ್ಕೆ ಏರಿದ ಜೈಸ್ವಾಲ್‌

11:58 PM Feb 28, 2024 | Team Udayavani |

ದುಬಾೖ: ಭಾರತದ ಡ್ಯಾಶಿಂಗ್‌ ಓಪನರ್‌ ಯಶಸ್ವಿ ಜೈಸ್ವಾಲ್‌ ನೂತನ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನಕ್ಕೆ ಏರಿ ದ್ದಾರೆ. ನೂತನ ವಿಕೆಟ್‌ ಕೀಪರ್‌ ಧ್ರುವ ಜುರೆಲ್‌ 31 ಸ್ಥಾನ ಗಳ ಭರ್ಜರಿ ಪ್ರಗತಿ ಯೊಂದಿಗೆ 69ನೇ ಸ್ಥಾನ ತಲುಪಿದ್ದಾರೆ.

Advertisement

ಯಶಸ್ವಿ ಜೈಸ್ವಾಲ್‌ 69ನೇ ರ್‍ಯಾಂಕಿಂಗ್‌ನೊಂದಿಗೆ ಇಂಗ್ಲೆಂಡ್‌ ಎದುರಿನ ಸರಣಿ ಆರಂಭಿಸಿದ್ದರು. ಸತತ ಎರಡು ದ್ವಿಶತಕ, ರಾಂಚಿ ಟೆಸ್ಟ್‌ನಲ್ಲಿ ಬಾರಿಸಿದ 73 ಹಾಗೂ 37 ರನ್‌ ಸಾಧನೆಯಿಂದಾಗಿ ಈಗ 12ನೇ ಸ್ಥಾನ ತಲುಪಿದ್ದಾರೆ (727). ಈ ಪಂದ್ಯಕ್ಕೂ ಮುನ್ನ 15ನೇ ಸ್ಥಾನದಲ್ಲಿದ್ದರು. ಸರಣಿ ಮುಗಿದ ಬಳಿಕ ಟಾಪ್‌-10 ಯಾದಿಯಲ್ಲಿ ಕಾಣಿಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ.

ರಾಂಚಿಯಲ್ಲಿ 90 ಹಾಗೂ 39 ರನ್‌ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರ ರಾದ ಧ್ರುವ ಜುರೆಲ್‌ ಒಮ್ಮೆಲೇ 31 ಸ್ಥಾನ ಮೇಲೇರಿದ್ದಾರೆ. ಅವರೀಗ ರ್‍ಯಾಂಕಿಂಗ್‌ ಯಾದಿಯಲ್ಲಿ 69ನೇ ಸ್ಥಾನ ಅಲಂಕರಿ ಸಿದ್ದಾರೆ.

ಇಂಗ್ಲೆಂಡ್‌ನ‌ ಮಾಜಿ ನಂ.1 ಆಟಗಾರ ಜೋ ರೂಟ್‌ 2 ಸ್ಥಾನಗಳ ಪ್ರಗತಿ ಸಾಧಿಸಿದ್ದು, 3ನೇ ರ್‍ಯಾಂಕಿಂಗ್‌ ಬ್ಯಾಟರ್‌ ಎನಿಸಿದ್ದಾರೆ (799). ರಾಂಚಿ ಟೆಸ್ಟ್‌ನಲ್ಲಿ 122 ರನ್‌ ಬಾರಿಸಿದ್ದು ರೂಟ್‌ ನೆಗೆತಕ್ಕೆ ಕಾರಣ.

ಕೇನ್‌ ವಿಲಿಯಮ್ಸನ್‌ (893), ಸ್ಟೀವನ್‌ ಸ್ಮಿತ್‌ (799) ಮೊದಲೆರಡು ಸ್ಥಾನ ಕಾಯ್ದು ಕೊಂಡಿ ದ್ದಾರೆ. ಟಾಪ್‌-10 ಯಾದಿ ಯಲ್ಲಿರುವ ಭಾರತದ ಏಕೈಕ ಬ್ಯಾಟರ್‌ ವಿರಾಟ್‌ ಕೊಹ್ಲಿ. 2 ಸ್ಥಾನ ಕುಸಿದಿರುವ ಅವರು 9ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ (744).

Advertisement

ಬೌಲಿಂಗ್‌ ರ್‍ಯಾಂಕಿಂಗ್‌
ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಿ ಜಸ್‌ಪ್ರೀತ್‌ ಬುಮ್ರಾ (867) ಮತ್ತು ದ್ವಿತೀಯ ಸ್ಥಾನಿ ಆರ್‌. ಅಶ್ವಿ‌ನ್‌ (846) ನಡುವಿನ ಅಂಕಗಳ ಅಂತರ ಕಡಿಮೆ ಯಾಗಿದೆ. ಬುಮ್ರಾಗೆ ರಾಂಚಿ ಟೆಸ್ಟ್‌ ಪಂದ್ಯ ದಲ್ಲಿ ವಿರಾಮ ನೀಡಲಾಗಿತ್ತು. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ 10 ಸ್ಥಾನಗಳ ಪ್ರಗತಿ ಸಾಧಿಸಿದ್ದು, 32ನೇ ರ್‍ಯಾಂಕಿಂಗ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಂಚಿಯಲ್ಲಿ ಮಿಂಚಿದ ಇಂಗ್ಲೆಂಡ್‌ನ‌ ಸ್ಪಿನ್ನರ್‌ ಶೋಯಿಬ್‌ ಬಶೀರ್‌ ಒಮ್ಮೆಲೇ 38 ಸ್ಥಾನ ಮೇಲೇರಿದ್ದು, ಜೀವನಶ್ರೇಷ್ಠ 80ನೇ ರ್‍ಯಾಂಕಿಂಗ್‌ ಪಡೆದಿದ್ದಾರೆ.

ಆರಂಭಕಾರ ಜಾಕ್‌ ಕ್ರಾಲಿ ಮೊದಲ ಸಲ ಟಾಪ್‌-20 ಯಾದಿಯಲ್ಲಿ ಕಾಣಿಸಿಕೊಂಡಿ ದ್ದಾರೆ. ರಾಂಚಿಯಲ್ಲಿ ಇವರ ಸಾಧನೆ 42 ಹಾಗೂ 60 ರನ್‌. ಹಾಗೆಯೇ ಆಸ್ಟ್ರೇಲಿಯದ ಟ್ರ್ಯಾವಿಸ್‌ ಹೆಡ್‌ ಕೂಡ ಮೊದಲ ಬಾರಿಗೆ ಅಗ್ರ ಇಪ್ಪತ್ತರಲ್ಲಿ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next